ಗಂಗಾವತಿ : ರಾಜ್ಯದಲ್ಲಿ ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್, ಮಂಡ್ಯದಲ್ಲಿ ಹನುಮ ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದು ಅಕ್ಷಮ್ಯ ಅಪರಾಧ ಎಂದು ಗಂಗಾವತಿಯ ಶಾಸಕ ಜಿ. ಜನಾರ್ದರೆಡ್ಡಿ ಹೇಳಿದರು.
ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಹನುಮ ಧ್ವಜ ತೆರವುಗೊಳಿಸಿದ ಘಟನೆ ಹಿನ್ನೆಲೆ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜನಾರ್ದರೆಡ್ಡಿ, ಪ್ರತಿಭಟನಾ ನಿರತರನ್ನು ಮಾತನಾಡಿಸಿ ಘಟನೆಯ ಪೂರ್ವಪರ ಮಾಹಿತಿ ಪಡೆದುಕೊಂಡರು.ಬಳಿಕ ವಿವಾದಿತ ಸ್ಥಳಕ್ಕೆ ತೆರಳಿ ಸ್ತಂಭದ ಕೆಳ ಭಾಗದಲ್ಲಿ ಹನುಮಧ್ವಜ ಇಡಲು ಯತ್ನಿಸಿದರು. ಆದರೆ ಪೊಲೀಸರು ಆಸ್ಪದ ನೀಡದ ಹಿನ್ನೆಲೆ ವಾಪಾಸ್ಸಾದ ರೆಡ್ಡಿ, ಬಳಿಕ ಮಾತನಾಡಿ ಸಕರ್ಾರ ಹಿಂದುಗಳನ್ನು ಧಮನ ಮಾಡುವ ಯತ್ನಕ್ಕೆ ಕೈ ಹಾಕಿದೆ.
ಯಾವುದೇ ವಿವಾದ ಇಲ್ಲದ ಸ್ತಂಭದಲ್ಲಿದ್ದ ಹನುಮ ಧ್ವಜವನ್ನು ಕೆಳಕ್ಕೆ ಇಳಿಸಿ ಜಿಲ್ಲಾಡಳಿತದಿಂದ ಅಲ್ಲಿ ರಾಷ್ಟ್ರಧ್ವಜ ಹಾರಿಸುವ ಉದ್ದೇಶ ಏನಿತ್ತು. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದೇ ಸಕರ್ಾರದ ಉದ್ದೇಶವಾಗಿದ್ದು, ಈ ಮೂಲಕ ಹಿಂದುಗಳ ಭಾವನೆಗಳನ್ನು ಕೆರಳಿಸುವ ಯತ್ನಕ್ಕೆ ಕೈಹಾಕಿದೆ.
ಅಯೋಧ್ಯೆಯಲ್ಲಿನ ರಾಮಮಂದಿರ ಉದ್ಘಾಟನೆಯ ಬಳಿಕ ಇಡೀ ದೇಶದಲ್ಲಿ ಹಿಂದುಗಳಲ್ಲಿ ಒಗ್ಗಟ್ಟು ಬರುತ್ತಿರುವುದನ್ನು ಕಂಡು ಕುದ್ದು ಹೋಗುತ್ತಿರುವ ಕಾಂಗ್ರೆಸ್, ಇಂತಹ ಕೃತ್ಯಕ್ಕೆ ಕೈಹಾಕುತ್ತಿದೆ. ಇದು ಸಕರ್ಾರಕ್ಕೆ ಶೋಭೆ ತರುವ ವಿಚಾರವಲ್ಲ. ಹನುಮ ಭಕ್ತರ ಆಕ್ರೋಶಕ್ಕೆ ಮಣಿದು ರಾಷ್ಟ್ರಧ್ವಜ ತೆಗೆದರೆ ಅದು ರಾಷ್ಟ್ರಕ್ಕೆ ಅಪಮಾನ ಮಾಡಿದಂತಾಗುತ್ತದೆ. ಹನುಮ ಧ್ವಜ ಹಾರಿಸಿದ್ದರೆ ಇಡೀ ಎರಾಜ್ಯದಾದ್ಯಂತ ಗಲಭೆಗೆ ಸ್ವತಃ ಸಕರ್ಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆರೋಪಿಸಿದರು.
ಕೂಡಲೆ ವಿವಾದಿತ ಸ್ಥಳದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಹನುಮಧ್ವಜ ಹಾರಿಸಲು ಅವಕಾಶ ಮಾಡಿಕೊಡಬೇಕು. ರಾಷ್ಟ್ರೀಯ ಹಬ್ಬಗಳು ಬಂದಾಗ ಬೇಕಿದ್ದರೆ ರಾಷ್ಟ್ರಧ್ವಜ ಹಾರಿಸಲು ಹನುಮ ಭಕ್ತರ ಮನವೊಲಿಸಬೇಕು ಎಂದು ರೆಡ್ಡಿ ಒತ್ತಾಯಿಸಿದರು.


