ಖಾನಾಪೂರ : ತಾಲೂಕಿನ ಸುರಪುರ ಕೆರವಾಡ ಸರಕಾರಿ ಪ್ರೌಢ ಶಾಲೆಯಲ್ಲಿ 12 ವರ್ಷ 2 ತಿಂಗಳು 29 ದಿನಗಳ ಕಾಲ ಸೇವೆ ಸಲ್ಲಿಸಿ ಹುಕ್ಕೇರಿ ತಾಲೂಕಿನ ಎಲಿಮುನವಳ್ಳಿಯ GHS ಶಾಲೆಗೆ ವರ್ಗಾವಣೆಗೊಂಡ ಪ್ರಯುಕ್ತ ಶ್ರೀ ಬಸವರಾಜ ಶಂಕರ ಗುರವ ಅವರ. ಬಿಳ್ಕೋಡುಗೆಯನ್ನು ಅದ್ದೂರಿಯಾಗಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ ಗುರವ ಸರ ಅವರ ಕುರಿತು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು ಅವರ ಆತ್ಮೀಯ ಶಿಕ್ಷಕ ಬಳಗ ಅವರ ಬಗ್ಗೆ ಮಾತನಾಡುವಾಗ ಕಣ್ಣೀರು ಹಾಕಿದರು , ಹಾಗೆ ಎಲ್ಲ ವಿದ್ಯಾರ್ಥಿಗಳು ಕೂಡ ತಮ್ಮ ನೆಚ್ಚಿನ ಗುರುವಿನ ಅಪಾರ ಪ್ರೀತಿಯನ್ನು ನೆನೆದು ಕಣ್ಣೀರು ಹಾಕಿದರು , ಅವರ ಮುಂದಿನ ಜೀವನ ಸುಖಕರವಾಗಿರಲೆಂದು ಹರಿಸಿದರು. ಪ್ರತಿಯೊಂದು ಬ್ಯಾಚಿನ ಹಳೆಯ ವಿದ್ಯಾರ್ಥಿಗಳು ಬಂದು ಗುರುಕಾಣಿಕೆ ನೀಡಿ ಸನ್ಮಾನಿಸಿದರು.
ಎಸ್.ಡಿ.ಎಮ್.ಸಿ ಅದ್ಯಕ್ಷರು , ಸದಸ್ಯರು .. ಊರಿನ ಹಿರಿಯರು , ಈಗ ಕಲಿಯುತ್ತಿರುವ ವಿದ್ಯಾರ್ಥಿಗಳು ಊಡುಗೊರೆ, ಶಾಲು ಸನ್ಮಾನಗಳ ಹೊಳೆಯೆ ಹರಿಸಿದರು.ಕೊನೆಯಲ್ಲಿ ತಮ್ಮ ನೆಚ್ಚಿನ ಶಿಕ್ಷಕನ ಜೊತೆ ಸೆಲ್ಫಿ ತೆಗೆದುಕೊಂಡರು,ಎಲ್ಲಾ ವಿದ್ಯಾರ್ಥಿಗಳು,ಊರಿನ ಯುವಕರು , ಮುಖ್ಯೋಪಾಧ್ಯಾಯರು,ಸಾಲಾಗಿ ನಿಂತು ಹೂ ಮಳೆ ಸುರುಸಿ,ಗೌರವಪೂರ್ವಕವಾಗಿ ಬೀಳ್ಕೊಟ್ಟರು.
ಸುರಪುರ ಕೆರವಾಡ ಗ್ರಾಮವು ಶಿಕ್ಷಕನ ಬದುಕಿನ ಅತ್ಯಂತ ಸಾರ್ಥಕ ಕ್ಷಣಕ್ಕೆ ಸಾಕ್ಷಿಯಾಯಿತು ನಂತರ ಗುರುಗಳಾದ ಶ್ರೀ ಬಸವರಾಜ ಗುರವ ಅವರು ಶಾಲೆಗೆ 10.000 ರೂ ವೆಚ್ಚದ ಪ್ಲೇಟ್ ಸ್ಟ್ಯಾಂಡ ಕೊಡುಗೆಯಾಗಿ ನಿಡಿದರು.


