Saturday, May 2, 2026
Flats for sale
Homeರಾಜಕೀಯಕೋಲ್ಕತಾ : ಬಂಗಾಳದಲ್ಲಿ ಸ್ಟ್ರಾಂಗ್ ರೂಂಗೆ ಕಟ್ಟು ನಿಟ್ಟಿನ ಭದ್ರತೆ – ಕೇಂದ್ರ ಪಡೆಗಳ ನಿಯೋಜನೆ.

ಕೋಲ್ಕತಾ : ಬಂಗಾಳದಲ್ಲಿ ಸ್ಟ್ರಾಂಗ್ ರೂಂಗೆ ಕಟ್ಟು ನಿಟ್ಟಿನ ಭದ್ರತೆ – ಕೇಂದ್ರ ಪಡೆಗಳ ನಿಯೋಜನೆ.

ಕೋಲ್ಕತಾ : ಪಚ್ಚಿಮ ಬಂಗಾಳದಲ್ಲಿ ಸ್ಟ್ರಾಂಗ್ ರೂಂನಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಭದ್ರತೆಯನ್ನು ಕಟ್ಟು ನಿಟ್ಟಾಗಿಸಿದೆ.

ಮುಖ್ಯಮಂತ್ರಿ ಮಮತಾ ಬಾನೆರ್ಜಿ ಅವರು ಭವಾನಿಪುರ ಕ್ಷೇತ್ರದ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ, ಇವಿಎಂ ಯಂತ್ರಗಳಲ್ಲಿ ತೊಂದರೆ ಅಥವಾ ಟ್ಯಾಂಪರಿಂಗ್ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. “ಜನರ ತೀರ್ಪನ್ನು ಯಾರೂ ಕದಿಯಲು ಸಾಧ್ಯವಿಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಸ್ಟ್ರಾಂಗ್ ರೂಂಗಳ ಬಳಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜನೆ ಮಾಡಿದ್ದೂ 24 ಗಂಟೆಗಳ ಸಿಸಿಟಿವಿ ನಿಗಾವಹಣೆ ವಹಿಸಿದೆ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಕೋಲ್ಕತಾದ ಸಾಕಾವತ್ ಮೆಮೋರಿಯಲ್ ಶಾಲೆ ಸೇರಿದಂತೆ ಹಲವು ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮರುಮತದಾನ ಘೋಷಣೆ:

ಎರಡನೇ ಹಂತದ ಚುನಾವಣೆಯಲ್ಲಿ ಅಕ್ರಮದ ಆರೋಪಗಳ ಹಿನ್ನೆಲೆ, ದಕ್ಷಿಣ 24 ಪರಗಣ ಸೇರಿದಂತೆ ಎರಡು ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ಮರುಮತದಾನ ನಡೆಯಲಿದೆ.

ಬಿಜೆಪಿ ಅಭ್ಯರ್ಥಿಯ ಚಿಹ್ನೆ ಕಾಣದಂತೆ ಟೇಪ್ ಅಂಟಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟಿನಲ್ಲಿ, ಬಂಗಾಳದಲ್ಲಿ ಚುನಾವಣಾ ಪ್ರಕ್ರಿಯೆ ಗರಂ ಆಗಿದ್ದು, ಭದ್ರತೆ ಹಾಗೂ ಮರುಮತದಾನ ಕ್ರಮಗಳು ಹೆಚ್ಚಳವಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular