Sunday, May 3, 2026
Flats for sale
Homeದೇಶಕೋಲ್ಕತಾ : ಬಂಗಾಳದಲ್ಲಿ ದೀದಿ ಸರ್ಕಾರ ವಿರುದ್ಧ ಜನರ ಆಕ್ರೋಶ – ಬೀದಿಗಿಳಿದು ಪ್ರತಿಭಟನೆ.

ಕೋಲ್ಕತಾ : ಬಂಗಾಳದಲ್ಲಿ ದೀದಿ ಸರ್ಕಾರ ವಿರುದ್ಧ ಜನರ ಆಕ್ರೋಶ – ಬೀದಿಗಿಳಿದು ಪ್ರತಿಭಟನೆ.

ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತ್ರಿಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಅಸಮಾಧಾನ ತೀವ್ರಗೊಂಡಿದ್ದು, ಹಲವು ಕಡೆ ಸ್ಥಳೀಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ತಾ ಕ್ಷೇತ್ರದಲ್ಲಿ, ಟಿಎಂಸಿ ಕಾರ್ಯಕರ್ತರಿಂದ ಬೆದರಿಕೆ ಹಾಗೂ ಗಲಭೆ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮತ ಎಣಿಕೆ ಮತ್ತು ಮರುಮತದಾನದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕೇಂದ್ರ ಸರಕಾರ ಸೆಂಟ್ರಲ್ ರೆಸೆರ್ವ್ ಪೊಲೀಸ್ ಫೋರ್ಸ್ ಮತ್ತು RAF ಪಡೆಗಳನ್ನು ಪ್ರಮುಖ ಪ್ರದೇಶಗಳಲ್ಲಿ ಕೇಂದ್ರ ಭದ್ರತಾ ಪಡೆಗಳನ್ನು ಕಾನೂನು ಸುವ್ಯವಸ್ಥೆ ಕಾಪಾಡಲು ಶಸ್ತ್ರಸಜ್ಜಿತ ವಾಹನಗಳ ನಿಯೋಜಿಸಲಾಗಿದೆ. ಪ್ರತಿಭಟನಾಕಾರರು, ಫಾಲ್ತಾ ಕ್ಷೇತ್ರದಲ್ಲಿ ಮರುಮತದಾನ ನಡೆಸಬೇಕು ಹಾಗೂ ಕೇಂದ್ರ ಪಡೆಗಳನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳೀಯರು, ಟಿಎಂಸಿ ಕಾರ್ಯಕರ್ತರಿಂದ ಜೀವಭೀತಿ ಎದುರಿಸುತ್ತಿರುವುದಾಗಿ ಆರೋಪಿಸಿದ್ದು, ಮಹಿಳೆಯರು ಕೂಡ ತಮ್ಮ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ನಾವು ಗೆದ್ದರೆ ನಿಮ್ಮ ಮನೆಗಳಿಗೆ ಬೆಂಕಿ ಹಾಕುತ್ತೇವೆ” ಎಂದು ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಎರಡನೇ ಹಂತದ ಚುನಾವಣೆಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಮಗ್ರತ್ ಪಶ್ಚಿಮ ಮತ್ತು ಡೈಮಂಡ್ ಹಾರ್ಬರ್ ಕ್ಷೇತ್ರಗಳ 15 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲಾಗಿದೆ.

ಇದೇ ವೇಳೆ, ಸ್ಟ್ರಾಂಗ್ ರೂಂನಲ್ಲಿ ಅಕ್ರಮ ನಡೆದಿರುವ ಕುರಿತು ಟಿಎಂಸಿ ಮತ್ತು ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.ಒಟ್ಟಿನಲ್ಲಿ, ಬಂಗಾಳದಲ್ಲಿ ರಾಜಕೀಯ ಉದ್ವಿಗ್ನತೆ ಗರಿಗೆದರಿದ್ದು, ಭದ್ರತೆ ಕಟ್ಟು ನಿಟ್ಟಾಗಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular