Wednesday, March 18, 2026
Flats for sale
Homeಜಿಲ್ಲೆಕಿನ್ನಿಗೋಳಿ: ಕಾರು-ಟಿಪ್ಪರ್ ಡಿಕ್ಕಿ- ಓರ್ವ ಸಾವು, ನಾಲ್ವರಿಗೆ ಗಾಯ.

ಕಿನ್ನಿಗೋಳಿ: ಕಾರು-ಟಿಪ್ಪರ್ ಡಿಕ್ಕಿ- ಓರ್ವ ಸಾವು, ನಾಲ್ವರಿಗೆ ಗಾಯ.

ಮಂಗಳೂರು  ಕಿನ್ನಿಗೋಳಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಮೂರುಕಾವೇರಿಯಲ್ಲಿ ಬುಧವಾರ ಸಂಜೆ ಕಾರು ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು, ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ.

ಬೆಳುವಾಯಿಯ ರಾಮಣ್ಣ (49) ಮೃತ ವ್ಯಕ್ತಿ. ಸಂಜೀವ, ಆನಂದ್, ದಿನೇಶ್, ಪ್ರವೀಣ್ ಮತ್ತು ವಸಂತ್ ಗಾಯಗೊಂಡವರು. ಕಾರು ಐಕಳ ಕಡೆಯಿಂದ ಮೂಲ್ಕಿ ಕಡೆಗೆ ಹೋಗುತ್ತಿದ್ದಾಗ ಟಿಪ್ಪರ್ ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿ ಮತ್ತೆ ಟಿಪ್ಪರ್ ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯ ಭಾಗಕ್ಕೆ ಚಲಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮನೆಯಲ್ಲಿದ್ದವರು ಕಾರ್ನಾಡ್‌ನಲ್ಲಿರುವ ತಮ್ಮ ಹಳೆಯ ಮನೆಯನ್ನು ಕೆಡವುವ ಕೆಲಸ ಮುಗಿಸಿ ಬೆಳುವಾಯಿಗೆ ಮರಳುತ್ತಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular