Saturday, July 25, 2026
Homeಜಿಲ್ಲೆಕಾಸರಗೋಡು: ಮೀನುಗಾರಿಕೆಯ ನಿಯಮ ಉಲ್ಲಂಘನೆ,ಕರ್ನಾಟಕದ 3 ಬೋಟ್‌ಗಳನ್ನು ವಶಪಡಿಸಿಕೊಂಡ ಕೇರಳ ಅಧಿಕಾರಿಗಳು.

ಕಾಸರಗೋಡು: ಮೀನುಗಾರಿಕೆಯ ನಿಯಮ ಉಲ್ಲಂಘನೆ,ಕರ್ನಾಟಕದ 3 ಬೋಟ್‌ಗಳನ್ನು ವಶಪಡಿಸಿಕೊಂಡ ಕೇರಳ ಅಧಿಕಾರಿಗಳು.

ಕಾಸರಗೋಡು : ಕೇರಳದ ಮೀನುಗಾರಿಕಾ ಇಲಾಖೆಯು ತ್ರಿಕರಿಪುರ, ಶಿರಿಯಾ ಮತ್ತು ಬೇಕಲ ಕರಾವಳಿ ಪೊಲೀಸರ ಸಹಯೋಗದಲ್ಲಿ ರಾತ್ರಿ ಸಮಯದಲ್ಲಿ ಅನಧಿಕೃತ ಟ್ರಾಲ್ ಬೋಟ್ ಮೀನುಗಾರಿಕೆಗಾಗಿ ಕೇರಳಕ್ಕೆ ಪ್ರವೇಶಿಸಿದ ಕರ್ನಾಟಕದಿಂದ ಮೂರು ಬೋಟ್ಗಳನ್ನು ವಶಪಡಿಸಿಕೊಂಡಿದೆ.

ಮೀನುಗಾರಿಕೆ ಅನುಮತಿ ಮತ್ತು ಸಮಯದ ನಿರ್ಬಂಧಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏಷ್ಯನ್ ಬ್ಲೂ, ಶ್ರೀರಂಗ ಮತ್ತು ಗಣೇಶ್ ಪ್ರಸನ್ನ ಬೋಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೋಟ್‌ಗಳ ಮಾಲೀಕರಿಗೆ ಒಟ್ಟು 7.5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಕಾಸರಗೋಡು ಜಿಲ್ಲೆಯ ಮೀನುಗಾರಿಕಾ ಉಪನಿರ್ದೇಶಕರಾದ ಕೆ ಎ ಲಬೀಬ್ ರವರ ನಿರ್ದೇಶನದ ಮೇರೆಗೆ ರಾತ್ರಿ ಸಮಯದಲ್ಲಿ ಕುಂಬಳೆ ಸಮುದ್ರ ತೀರದ 12 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲಿ ಕರ್ನಾಟಕದ ಮೂರು ದೋಣಿಗಳು ಪತ್ತೆಯಾಗಿದ್ದು ಹೆಚ್ಚೆತ್ತ ಕೇರಳ ಅಧಿಕಾರಿಗಳು ಬೋಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular