Thursday, July 23, 2026
Homeಕ್ರೈಂಕಾರವಾರ : ಯುವತಿಯರ ನಗ್ನ ಫೋಟೋಗಳನ್ನು ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರ, ಇಬ್ಬರ ಬಂಧನ .

ಕಾರವಾರ : ಯುವತಿಯರ ನಗ್ನ ಫೋಟೋಗಳನ್ನು ಎಡಿಟ್ ಮಾಡಿ ಬೆದರಿಸಿ ಅತ್ಯಾಚಾರ, ಇಬ್ಬರ ಬಂಧನ .

ಕಾರವಾರ : ಯುವತಿಯರ ನಗ್ನವಾಗಿ ಎಡಿಟ್ ತೋರಿಸಿ ಬೆದರಿಸಿ ಅತ್ಯಾಚಾರವೆಸಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅರ್ಜುನ್ ಅಲಿಯಾಸ್ ಅರುಣ ಗೌಡ ಮಳಲಿ ಹಾಗೂ ಈತನ ಸಂಬಂದಿ ಬಾಲಚAದ್ರನನ್ನು ಶಿರಸಿಯಲ್ಲಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದ್ದು, ಕೃತ್ಯಕ್ಕೆ ಸಹಕರಿಸುತ್ತಿದ್ದ ಅರ್ಜುನ್ ನ ತಲೆಮರೆಸಿಕೊಂಡಿರುವ ತಾಯಿಯ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ಈ ದುಷ್ಟರ ಗ್ಯಾಂಗ್ ಯುವತಿಯರನ್ನು ಮಾತಿನ ಮೋಡಿಯಿಂದಲೇ ಬಲೆಗೆ ಬೀಳಿಸಿಕೊಳ್ಳುತ್ತಿದ್ದು, ಮೋಹಕ್ಕೆ ಸಿಲುಕಿದ ಯುವತಿಯರ ಜತೆಗೆ ಪ್ರೀತಿಯ ನಾಟಕವಾಡುತ್ತಿದ್ದರು. ಬಳಿಕ ಪ್ರೀತಿಯ ನೆಪದಲ್ಲಿ ಫೋಟೋ ತೆಗೆಸಿಕೊಂಡು ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ತೋರಿಸಿ ಬೆದರಿಸಿ ಅತ್ಯಾಚಾರ ನಡೆಸುತ್ತಿದ್ದರು.

ಅರ್ಜುನ್ ವಿರುದ್ಧ ಶಿರಸಿ, ಬನವಾಸಿ, ಕುಂದಾಪುರ ಸೇರಿ ವಿವಿಧೆಡೆ ಯುವತಿಯರಿಗೆ ಬ್ಲಾಕ್ ಮೇಲ್ ಹಾಗೂ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆರೋಪಿ ಅರ್ಜುನ್‌ನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಕಲ್ಲು, ಹೆಂಚು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈತನಿಗೆ ಸಾಥ್ ನೀಡುತ್ತಿದ್ದ ಬಾಲಚಂದ್ರ ಬಂಧನದ ಭೀತಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೂವರು ಪೊಲೀಸರ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್ ವಿರುದ್ಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹೀನ ಕೃತ್ಯಕ್ಕೆ ತಾಯಿಯೇ ಸಾಥ್ ಅತ್ಯಾಚಾರಿ ಆರೋಪಿ ಅರ್ಜುನ್‌ನಿಗೆ ತಾಯಿಯೇ ಸಾಥ್ ನೀಡುತ್ತಿದ್ದಳು ಎಂದು ಬಹಿರಂಗವಾಗಿದ್ದು, ಪೊಲೀಸರು ಬಂಧಿಸಲು ಬಂದಾಗ ಘಟನಾ ಸ್ಥಳದಿಂದ ಪರಾರಿ ಆಗಿದ್ದಾಳೆ. ಇನ್ನೂ ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕರಾವಳಿ ಮೂಲದ ಸುಂದರ ಯುವತಿಯರನ್ನೇ ಗುರಿಯಾಗಿಸಿಕೊಂಡು ಅವರ ಜತೆಗೆ ಚಾಟಿಂಗ್ ಮಾಡುತ್ತಾ ಬಲೆಗೆ ಕೆಡವುತ್ತಿದ್ದ.ಈತನೊಂದಿಗೆ ಚಾಟಿಂಗ್
ಸಿಲುಕಿದರೆ ಮುಗಿದೆ ಹೋಯಿತು. ಆತ್ಮೀಯತೆಯನ್ನು ಬೆಳೆಸಿಕೊಂಡು ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ. ಮಾತ್ರವಲ್ಲ ಆತನೊಂದಿಗೆ ಇದ್ದಾಗಲೇ ಖಾಸಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ. ಇದಾದ ಕೆಲ ದಿನಗಳೇ ತನ್ನ ನಿಜವಾದ ಮುಖವನ್ನು ತೋರಿಸುತ್ತಿದ್ದ. ಈತನನ್ನು ನಂಬಿದ ಯುವತಿಯರಿಗೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಿದ್ದ. ಬೆದರಿಸಿ ಪದೆ ಪದೇ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಹೀಗೆ ಅರ್ಜುನ್‌ಗೌಡನ ಕಾಮಚೇಷ್ಟೆಗೆ ಸಂಬಂಧಿಕ ಬಾಲಚಂದ್ರಗೌಡ ಎಂಬಾತನು ಸಾಥ್ ನೀಡುತ್ತಿದ್ದ. ಕೆಲವರಿಂದ ಹಣ ವಸೂಲಿ ಮಾಡುತ್ತಿದ್ದ ಕಾರಣಕ್ಕೆ ತಾಯಿ ನಾಗವೇಣಿ ಲಕ್ಷ÷್ಮಣಗೌಡ ಕೂಡ ಸಾಥ್ ನೀಡುತ್ತಿದ್ದಳು. ಕರಾವಳಿಯಲ್ಲಿ ಇಂತಹ ಪ್ರಕರಣಗಳು ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಹಲ್ಲೆ ಮಾಡಿದ್ದಾರೆ.

ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular