Thursday, July 23, 2026
Homeರಾಜ್ಯಕಲಬುರಗಿ : ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವಸ್ಥಾನದ ಹುಂಡಿಗೆ ನೋಟಿನಲ್ಲಿ ಬರೆದು...

ಕಲಬುರಗಿ : ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವಸ್ಥಾನದ ಹುಂಡಿಗೆ ನೋಟಿನಲ್ಲಿ ಬರೆದು ಹರಕೆ ಹೊತ್ತ ಸೊಸೆ.!

ಕಲಬುರಗಿ : ಎಷ್ಟೇ ಜಗಳವಾಡಿದರು ಅತ್ತೆ ಸೊಸೆ ಒಂದಾದ ಘಟನೆ ಬಾರಿ ಕಡಿಮೆ.ಪ್ರಪಂಚದಲ್ಲಿ ಅತ್ತೆ ಸೊಸೆ ಜೊತೆಯಲ್ಲಿ ಅನ್ನೋನ್ಯತೆಯಿಂದ ಇರುವುದು ೨೦ % ಇರಬಹುದು ಎಂಬುದು ಹಿರಿಯರ ಮಾತು.ಲವು ಮನೆಗಳಲ್ಲಿ ಅತ್ತೆಯದ್ದೇ ನಿರ್ಣಯವಾದರೆ, ಇನ್ನು ಕೆಲವು ಮನೆಗಳಲ್ಲಿ ಸೊಸೆಯದ್ದೇ ದರ್ಬಾರ್​. ಒಟ್ಟಿನಲ್ಲಿ ಹೆಚ್ಚಿನ ಮನೆಗಳಲ್ಲಿ ಅತ್ತೆ-ಸೊಸೆ ಹಾವು-ಮುಂಗುಸಿ ತರ ಇರುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ದೇವಸ್ಥಾನದ ಹುಂಡಿಯಲ್ಲಿನ ಹಣ ಎಣಿಸುತ್ತಿರುವ ವೇಳೆ ಒಂದು ೫೦ ರೂಪಾಯಿಯ ನೋಡಿ ದಿಗ್ಭ್ರಮಮೆ ಗೊಂಡಿದ್ದಾರೆ ಅಷ್ಟಕ್ಕೊ ಅದರಲ್ಲಿ ಏನು ಬರೆದಿರಬಹುದೆಂಬುದು ನೋಡಿ… ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವರ ಹುಂಡಿಯಲ್ಲಿ ಕಾಣಿಕೆ ಹಾಕಿರುವ 50 ರೂಪಾಯಿ ಮುಖ ಬೆಲೆಯ ನೋಟ್ ಪತ್ತೆಯಾಗಿದೆ.ಕೆಲವರು ನಮ್ಮ ಅತ್ತೆ ಬೇಗ ಹುಷಾರಾಗಿ ಬರಲಪ್ಪಾ ಅಂತ ದೇವರ ಬಳಿ ಪಾರ್ಥಿಸುವ ಸೊಸೆ ಬಗ್ಗೆ ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಇಲ್ಲೊಬ್ಬಳು ಸೊಸೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

ನೋಟಿನ ಮೇಲೆ ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಅನ್ನೋದನ್ನ ಬರೆಯಲಾಗಿದೆ. ಇದನ್ನು ಕಂಡು ಕೆಲವರು ನಕ್ಕಿದರೆ, ಇನ್ನು ಕೆಲವರು ಅಚ್ಚರಿಗೊಂಡಿದ್ದಾರೆ.ಈ ನೋಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular