Thursday, July 23, 2026
Homeಜಿಲ್ಲೆಕಡಬ : ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಜಡೀ ಮಳೆ...

ಕಡಬ : ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಜಡೀ ಮಳೆ ಲೆಕ್ಕಿಸದೆ ಮೋದಿಯ ಅಪ್ಪಟ ಅಭಿಮಾನಿಯಿಂದ ಉರುಳು ಸೇವೆ.

ಕಡಬ : ಮೋದಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆ ಕಡಬದ ಹಿಂದೂ ಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತ, ಸಾಮಾಜಿಕ ಕಾರ್ಯಕರ್ತ ಮೋದಿಯವರ ಅಪ್ಪಟ ಅಭಿಮಾನಿ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ರಘರಾಮ ನ್ಯಾಕ್ ರವರು ಜಡೀ ಮಳೆ ಲೆಕ್ಕಿಸದೆ ಉರುಳು ಸೇವೆಮಾಡಿದ್ದಾರೆ.

ಕಡಬದ ಶ್ರೀಕಂಠ ಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ತನಕ ಉರುಳುಸೇವೆ ಮಾಡಿದ್ದು ಭಾರೀ ಮಳೆಯ ನಡುವೆಯೂ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಪೇಟೆಯಲ್ಲಿ ಶಂಖ, ಜಾಗಟೆ, ಶಬ್ದದೊಂದಿಗೆ ಜೈಕಾರ ಕೂಗುತ್ತಾ ರಘುರಾಮ ನ್ಯಾಕ್ ಅವರ ಉರುಳು ಸೇವೆಗೆ ಕಾರ್ಯಕರ್ತರು ಪ್ರೋತ್ಸಾಹ ನೀಡಿದ್ದಾರೆ.

ರಘುರಾಮ ನ್ಯಾಕ್ ಅವರು 2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ಥಿತ್ವಕ್ಕೆ ಬಂದಾಗ ಈಶ್ವರಮಂಗಲದ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಒಂದು ವಾರದ ಉಪವಾಸ ವೃತ ಕೈಗೊಂಡಿದ್ದರು. ಮೋದಿಯವರು ಮತ್ತೆ ಪ್ರಧಾನಿಯಾದರೆ ಉರುಳು ಸೇವೆ ಮಾಡುವ ಹರಕೆ ಹೊತ್ತುಕೊಂಡಿದ್ದರು. ಅಂತೆಯೆ ಅವರು ಹರಕೆಯನ್ನು ತೀರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular