Thursday, July 23, 2026
Homeಜಿಲ್ಲೆಕಡಬ : ಡೆಂಗ್ಯೂಗೆ ಜ್ವರಕ್ಕೆ 31 ವರ್ಷದ ವ್ಯಕ್ತಿ ಬಲಿ.

ಕಡಬ : ಡೆಂಗ್ಯೂಗೆ ಜ್ವರಕ್ಕೆ 31 ವರ್ಷದ ವ್ಯಕ್ತಿ ಬಲಿ.

ಕಡಬ : ಕಡಬ ತಾಲೂಕಿನ ಕುಟ್ರುಪ್ಪಾಡಿಯ 31 ವರ್ಷದ ವ್ಯಕ್ತಿಯೊಬ್ಬರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

ಶಿಜು (31) ಮೃತ ವ್ಯಕ್ತಿ. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಶಿಜು ಮಲಂಕರ ಕ್ಯಾಥೋಲಿಕ್ ಚರ್ಚ್ ಪುತ್ತೂರು ಧರ್ಮಪ್ರಾಂತ್ಯದ ಧರ್ಮಗುರು ಫಾ.ಥಾಮಸ್ ಅವರ ಸಹೋದರ. ಅವರು ತಾಯಿ, ಪತ್ನಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular