Thursday, July 23, 2026
Homeವಿದೇಶಉತ್ತರ ಕನ್ನಡ : ಕುಮಟಾ ಬಳಿ ಪತ್ತೆಯಾದ ಚೀನಾದ ಬೇಹುಗಾರಿಕೆ ದೋಣಿ : ಕಟ್ಟೆಚ್ಚರ ವಹಿಸಿದ...

ಉತ್ತರ ಕನ್ನಡ : ಕುಮಟಾ ಬಳಿ ಪತ್ತೆಯಾದ ಚೀನಾದ ಬೇಹುಗಾರಿಕೆ ದೋಣಿ : ಕಟ್ಟೆಚ್ಚರ ವಹಿಸಿದ ಕರಾವಳಿ ಕಾವಲು ಪಡೆ .

ಉತ್ತರ ಕನ್ನಡ : ಕರಾವಳಿ ಭಾಗದ ಸಮುದ್ರ ತೀರದಲ್ಲಿ ಚೀನಾಕ್ಕೆ ಸೇರಿದ ದೋಣಿಯೊಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಕಟ್ಟೆಚ್ಚರ ವಹಿಸಲಾಗಿದೆ. ಕುಮಟಾ ಬಳಿ ಆಳ ಸಮುದ್ರದ ನೀರಿನಲ್ಲಿ ಹಡಗು ಪತ್ತೆಯಾಗಿದ್ದು, ಕಾರವಾರದ ಸೀಬರ್ಡ್ ನೌಕಾ ನೆಲೆಯನ್ನು ಗುರಿಯಾಗಿಸಿಕೊಂಡು ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಪೊಲೀಸ್ ಪಡೆ ಎರಡೂ ಪ್ರಸ್ತುತ ತನಿಖೆ ನಡೆಸುತ್ತಿದ್ದು ಕುಮಟಾದಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಂದ ಚೀನಾದ ಬೋಟ್ ಇರುವ ಬಗ್ಗೆ ಮಾಹಿತಿ ದೊರೆತಿದೆ.

ಈ ದೋಣಿ ಚೀನಾದ ಫುಹುವಾ ಬಂದರಿಗೆ ಸೇರಿದ ದಾಖಲಾತಿ ದೊರೆತಿದ್ದು ಕುಮಟಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನೈಮಾನ್ ತನಿಖೆಯ ನೇತೃತ್ವ ವಹಿಸಿದ್ದಾರೆ. ಹೆಚ್ಚುವರಿಯಾಗಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ (CSP) ತಂಡವು ಇನ್ಸ್‌ಪೆಕ್ಟರ್ ವಿಕ್ಟರ್ ನೈಮನ್ ನೇತೃತ್ವದಲ್ಲಿ ದೋಣಿಯನ್ನು ನೋಡಿದ ಮೀನುಗಾರರಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು . ಮೀನುಗಾರಿಕಾ ದೋಣಿಗಳಲ್ಲಿದ್ದ ಸಿಬ್ಬಂದಿ ಚೀನಾದ ಹಡಗಿನ ವಿಡಿಯೋ ತುಣುಕನ್ನೂ ಸೆರೆಹಿಡಿದಿದ್ದಾರೆ.

ಭಾರತೀಯ ರಕ್ಷಣಾ ಪಡೆಗಳ ಕಣ್ತಪ್ಪಿಸಿ ಚೀನಾದ ದೋಣಿಯು ಭಾರತದ ಜಲಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿರಬಹುದು ಎಂದು ಶಂಕಿಸಲಾಗಿದೆ, ಇದು ಭಾರತದಲ್ಲಿನ ಆಯಕಟ್ಟಿನ ನೌಕಾ ನೆಲೆಗಳನ್ನು ಗುರಿಯಾಗಿಸಿಕೊಂಡು ಬೇಹುಗಾರಿಕೆ ಚಟುವಟಿಕೆಗಳನ್ನು ನಡೆಸುತ್ತಿರಬಹುದು ಎಂಬ ಆತಂಕವನ್ನು ಹುಟ್ಟುಹಾಕಿದ್ದು ಭಾರತದ ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಪೊಲೀಸ್ ಪಡೆ ಹೈ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular