Thursday, July 23, 2026
Homeಜಿಲ್ಲೆಉಡುಪಿ : ವಿಭಿನ್ನ ಹಾಡುಗಾರಿಕೆಗೆ ಹೆಸರಾಗಿದ್ದ ಉಡುಪಿಯ ವೈದ್ಯ ಡಾ ಸತೀಶ್ ಪೂಜಾರಿ ಹೃದಯಾಘಾತಕ್ಕೆ ಬಲಿ.

ಉಡುಪಿ : ವಿಭಿನ್ನ ಹಾಡುಗಾರಿಕೆಗೆ ಹೆಸರಾಗಿದ್ದ ಉಡುಪಿಯ ವೈದ್ಯ ಡಾ ಸತೀಶ್ ಪೂಜಾರಿ ಹೃದಯಾಘಾತಕ್ಕೆ ಬಲಿ.

ಉಡುಪಿ ; ಕುಂದಾಪುರದಲ್ಲಿ ಶ್ರೀಮಾತಾ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿದ್ದ ಡಾ ಸತೀಶ್ ಪೂಜಾರಿ ಅವರು ಹಾರ್ಟ್ ಅಟ್ಯಾಕ್ ನಿಂದ ನಿಧನ ಹೊಂದಿದ್ದಾರೆ.

ಫಿಟ್ನೆಸ್ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದ ಮತ್ತು ವೃತ್ತಿಯಿಂದ ವೈದ್ಯರಾಗಿದ್ದವರು ಹೃದಯಾಘಾತಕ್ಕೆ ಬಲಿಯಾಗುವುದು ಆಘಾತಕಾರಿ ಸಂಗತಿಯಾಗಿದೆ.

ಡಾ. ಸತೀಶ್ ಪೂಜಾರಿಯವರು ಶ್ರೀಮಾತಾ ಆಸ್ಪತ್ರೆಯ ಮಾಲೀಕರು ಆಗಿದ್ದು, ಇಂದು ಮುಂಜಾನೆ ಕೋಟತಟ್ಟುವಿನ ಮನೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ವಿಶ್ವವಿಖ್ಯಾತ ಗಾಯಕಿ ಎಸ್ ಜಾನಕಿ ಮತ್ತು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಜೊತೆ ಸಂಗೀತ ಕಾರ್ಯಕ್ರಮಗಳಲ್ಲಿ ಡಾ ಪೂಜಾರಿ ಹಾಡುತ್ತಿದ್ದರು.ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ಹೆಚ್ಚೆಚ್ಚಾಗಿ ತೊಡಸಿಸಿಕೊಂಡಿದ್ದ ಡಾ ಪೂಜಾರಿ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದರು
ಮೃತರು ಪತ್ನಿ ಮತ್ತು ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular