Sunday, July 26, 2026
Homeರಾಜ್ಯಅಂಕೋಲಾ : ಮೀನು ಲಾರಿಗೆ ರೀಕ್ಷಾ ಡಿಕ್ಕಿ,ಪ್ರಯಾಣಿಕರಿಗೆ ಗಾಯ.

ಅಂಕೋಲಾ : ಮೀನು ಲಾರಿಗೆ ರೀಕ್ಷಾ ಡಿಕ್ಕಿ,ಪ್ರಯಾಣಿಕರಿಗೆ ಗಾಯ.

ಅಂಕೋಲಾ : ಆಟೋ ರಿಕ್ಷಾಕ್ಕೆ ಮೀನು ತುಂಬಿದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಗಂಭೀರವಾಗಿ ಗಾಯಗೊಂಡ ಘಟನೆ ರಾ.ಹೆ66 ಶೇಟಗೇರಿ ಕ್ರಾಸ್ ಬಳಿ ನಡೆದಿದೆ.

ಆಟೋ ರಿಕ್ಷಾ ಚಾಲಕ ತಾಲೂಕಿನ ಪೂಜಗೇರಿ ನಿವಾಸಿ ವಿನೋದ ಚುಡಾಮಣಿ ಗಾವ್ಕಂರ (46) ಮತ್ತು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ನಿವಾಸಿಗಳಾದ ಪರೇಶ ಪ್ರಭಾಕರ ಶೊಯೆನ್ (50) ಅವರ ಪತ್ನಿ ಭಾಗ್ಯಶ್ರೀ ಶೊಯೆನ (42) ಮಕ್ಕಳ ಆದ ಶಶಾಂಕ (16) ಗೌರಂಗ (10) ಸಂಬಂಧಿ ಮೀರಾ ನಂದಕುಮಾರ (77) ಎನ್ನುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಅಂಕೋಲಾ ಕಡೆ ಹೋಗುತ್ತಿದ್ದ ಆಟೋರಿಕ್ಷಾಕೆ ಹಿಂದಿನಿಂದ ಅತಿ ವೇಗದಲ್ಲಿ ಬಂದ ಮೀನು ತುಂಬಿದ ಲಾರಿ ಡಿಕ್ಕಿ ಹೊಡೆದಿರುವುದೇ ಈ ಅಪಘಾತಕ್ಕೆ ಕಾರಣವೆಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಎರಡು ವಾಹನಗಳು ಜಕಂ ಗೊಂಡಿವೆ. ಮೀನು ಲಾರಿ ಚಾಲಕ ಕೇರಳ ಕಣ್ಣೂರು ನಿವಾಸಿ ಮಹಮ್ಮದ್ ಹಸೀಮ್ ಎಂಬಾತನ ಮೇಲೆ ದೂರು ದಾಖಲಾಗಿದ್ದು ಪಿಎಸ್ಐ ಸುನಿಲ್ ಹುಳ್ಳೊಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular