Wednesday, October 22, 2025
Flats for sale
Homeಕ್ರೀಡೆVirat Kohli: ಹೊಸ ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ, ಮತ್ತೊಂದು ಸಾಧನೆ ಮಾಡ್ತಾರಾ ವಿರಾಟ್?

Virat Kohli: ಹೊಸ ದಾಖಲೆಯ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ, ಮತ್ತೊಂದು ಸಾಧನೆ ಮಾಡ್ತಾರಾ ವಿರಾಟ್?

Virat Kohli: ಆಸ್ಟ್ರೇಲಿಯಾ ನೆಲದಲ್ಲಿ 2022 ರ ಟಿ20 ವಿಶ್ವಕಪ್‌ನಲ್ಲಿ ಕಿಂಗ್ ಕೊಹ್ಲಿ ರನ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಅವರು ಮತ್ತೊಂದು ಅತ್ಯುತ್ತಮ ದಾಖಲೆಗೆ ಕೇವಲ 42 ರನ್‌ಗಳ ಹಿಂದಿದ್ದಾರೆ.

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ T20 ವಿಶ್ವಕಪ್ 2022ರಲ್ಲಿ ಅವರು ರನ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಭರ್ಜರಿಯಾಗಿ ಪ್ರದರ್ಶನ ನೀಡುತ್ತಿದ್ದಾರೆ.

ಪಾಕಿಸ್ತಾನ ವಿರುದ್ಧ (ಔಟಾಗದೆ 82) ಸ್ಮರಣೀಯ ಇನ್ನಿಂಗ್ಸ್ ಆಡಿದ ಕೊಹ್ಲಿ, ನೆದರ್ಲೆಂಡ್ಸ್ ವಿರುದ್ಧ (ಔಟಾಗದೆ 62) ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆ ಬಳಿಕ ಬಾಂಗ್ಲಾದೇಶ ವಿರುದ್ಧವೂ ಸೂಪರ್ ಅರ್ಧಶತಕ ಸಿಡಿಸಿದ್ದರು. ಕಿಂಗ್ ಕೊಹ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ವಿರುದ್ಧ ಮಾತ್ರ ಕಡಿಮೆ ಗಳಿಸಿದ್ದಾರೆ.

ಅವರು ಈ ಮೆಗಾಟೂರ್ನಮೆಂಟ್‌ನಲ್ಲಿ ಆಡಿದ ಐದು ಇನ್ನಿಂಗ್ಸ್‌ಗಳಲ್ಲಿ 246 ರನ್ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಸರಾಸರಿ 123 ಆಗಿದೆ. ಅಲ್ಲದೆ, ಅವರು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹಾಗೂ ಇಂಗ್ಲೆಂಡ್ ತಂಡದ ವಿರುದ್ಧವೂ ಇದೇ ವೇಗ ಮುಂದುವರಿದರೆ ಕೊಹ್ಲಿ ಖಾತೆಗೆ ಮತ್ತೊಂದು ಅದ್ಭುತ ದಾಖಲೆ ಸೇರ್ಪಡೆಯಾಗಲಿದೆ.

ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಹಲವು ದಾಖಲೆಗಳನ್ನು ಮುರಿದಿರುವ ಕೊಹ್ಲಿ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟಿ20ಯಲ್ಲಿ 4,000 ರನ್ ಗಳಿಸಿದ ಮೊದಲ ಆಟಗಾರನಾಗಲು ಅವರಿಗೆ ಇನ್ನೂ 42 ರನ್ ಅಗತ್ಯವಿದೆ. ಕೊಹ್ಲಿ ಅದಕ್ಕಿಂತ ಹೆಚ್ಚು ಸ್ಕೋರ್ ಮಾಡಿ ಫೈನಲ್‌ಗೆ ಲಗ್ಗೆ ಇಡುತ್ತಾರೆ ಎಂದು ಭಾರತೀಯ ಅಭಿಮಾನಿಗಳು ಹಾರೈಸಿದ್ದಾರೆ. ಸೆಮಿಫೈನಲ್‌ನಲ್ಲಿ ಕೊಹ್ಲಿ ಅರ್ಧಶತಕ ಅಥವಾ ಅದಕ್ಕಿಂತ ಹೆಚ್ಚು ಬಾರಿಸಿದರೆ, ಟೀಂ ಇಂಡಿಯಾ ಬಹುತೇಕ ಗೆಲುವು ಸಾಧಿಸಲಿದೆ.

ಅಲ್ಲದೇ, ಅಡಿಲೇಡ್ ಮೈದಾನ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಫೇವರೇಟ್ ಪಿಚ್ ಆಗಿದೆ. ಈ ಮೆಗಾ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ವಿರಾಟ್ (ಔಟಾಗದೆ 64) ಅಜೇಯ ಅರ್ಧಶತಕ ಗಳಿಸಿದ್ದರು.

ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಸರಾಸರಿ 90.7 ರನ್ ಗಳಿಸಿದ್ದಾರೆ. ಅದರೊಂದಿಗೆ ಗುರುವಾರ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಅಬ್ಬರಿಸುವ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ಕೂಡ ಬಲಿಷ್ಠವಾಗಿ ಕಾಣುತ್ತಿದೆಯಾದರೂ.. ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಉತ್ತಮ ದಾಖಲೆ ಹೊಂದಿದೆ.

ಈ ಮಾದರಿಯಲ್ಲಿ ಈ ಎರಡು ತಂಡಗಳು 22 ಬಾರಿ ಮುಖಾಮುಖಿ ಆಗಿದ್ದರೆ, ಭಾರತ 12 ಬಾರಿ ಗೆದ್ದಿದೆ. ಇಂಗ್ಲೆಂಡ್ 10 ಪಂದ್ಯಗಳನ್ನು ಗೆದ್ದಿದೆ. ಮತ್ತು ಟಿ20 ವಿಶ್ವಕಪ್ ನಲ್ಲಿ ಮೂರು ಬಾರಿ (2007, 2009, 2012) ಉಭಯ ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ ಎರಡು ಬಾರಿ ಹಾಗೂ ಇಂಗ್ಲೆಂಡ್ ಒಂದು ಬಾರಿ ಗೆದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular