ಕಾಸರಗೋಡು : ಮಂಜೇಶ್ವರ ಸಮೀಪದ ಮಿಯಾಪದವು ಎಂಬಲ್ಲಿ ಶುಕ್ರವಾರ ಸಂಭವಿಸಿದ ಮೋಟಾರ್ ಸೈಕಲ್ ಮತ್ತು ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಮೃತರನ್ನು ಮಿಯಪದವು ದರ್ಬೆ ನಿವಾಸಿ ಹರೀಶ್ ಎಂಬವರ ಪುತ್ರ ಪ್ರೀತೇಶ್ ಶೆಟ್ಟಿ (21) ಹಾಗೂ ಬೆಜ್ಜಂಗಳ ಸುರೇಶ್ ಅವರ ಪುತ್ರ ಅಭಿಷೇಕ್ ಎಂ (21) ಎಂದು ಗುರುತಿಸಲಾಗಿದೆ.
ಮಿಯಾಪದವು ಬಳಿಯೂರು ಬಳಿ ಈ ಅವಘಡ ಸಂಭವಿಸಿದೆ. ವಿದ್ಯಾರ್ಥಿಗಳು ಕಾಲೇಜಿಗೆ ತೆರಳುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಇವರು ಮಂಗಳೂರಿನ ಪ್ರೇರಣಾ p.u.c ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.