ಉಳ್ಳಾಲ: ತಲಪಾಡಿ ಸಮೀಪದ ತಚ್ಚಣಿಯಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಯೊಬ್ಬನನ್ನು ಗಾಂಜಾ ಹಾಗೂ ಬೈಕ್ ಸಮೇತ ಉಳ್ಳಾಲ ಠಾಣಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇಬ್ಬರು ಯುವಕರು ಬೈಕ್ ನಲ್ಲಿ ತಲಪಾಡಿಯಿಂದ ತಚ್ಚಣಿ ಕಡೆಗೆ ಗಾಂಜಾ ತುಂಬಿರುವ ಗೋಣಿ ಚೀಲದ ಸಮೇತ ಸಂಚರಿಸುತ್ತಿದ್ದಾಗ ಉಳ್ಳಾಲ ಪೊಲೀಸರು ಬೈಕ್ ಅಡ್ಡಗಟ್ಟಿದ್ದು ಸವಾರ ವರ್ಕಾಡಿ ಸುಂಕದಕಟ್ಟೆ,ಪಾವುಳ ಬಳಿಯ ಪುರುಷಂಕೋಡಿ ನಿವಾಸಿ ಮೊಹಮ್ಮದ್ ರಾಜೀಕ್ ನನ್ನು ಸೆರೆಹಿಡಿಯಲಾಗಿದ್ದು ಸಹ ಸವಾರ ಪೊಲೀಸರ ಕಂಡು ಪರಾರಿಯಾಗಿದ್ದಾನೆ. ಬಂಧಿತನಿಂದ 40ಸಾವಿರ ರೂ. ಮೌಲ್ಯದ 4kg ಗಾಂಜಾ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆರೋಪಿ ವರ್ಕಾಡಿ ಮುರತ್ತಣೆ ನಿವಾಸಿ ಅಸ್ಗರ್ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಂಧಿತ ಆರೊಪಿಗಳ ವಿರುದ್ಧ ಈ ಹಿಂದೆ ಮಂಜೆಶ್ವರ, ಕಾಸರಗೋಡು ಹಾಗೂ ಕುಂಬ್ಳೆ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ಗಾಂಜಾ ಮಾರಾಟದಂತಹ ಹಲವಾರು ಪ್ರಕರಣಗಳು ದಾಖಾಲಾಗಿದೆ. ಉಳ್ಳಾಲ ಠಾಣೆಯ ಇನ್ಸ್ಪೆಕ್ಟರ್ ಸಂದೀಪ್ ರವರ ಮಾರ್ಗದರ್ಶನದಲ್ಲಿ ಪಿಎಸ್ ಐ ಗಳಾದ ರೇವಣ ಸಿದ್ಧಪ್ಪ, ಪ್ರದೀಪ್ ಟಿ,ಆರ್, ಶಿವಕುಮಾರ್ ಹಾಗು ಸಿಬ್ಬಂದಿಗಳಾದ ಅಶೋಕ್,ಅಕ್ಬರ್, ಸಾಗರ್,ವಾಸುದೇವ ಚೌಹಾಣ್, ಸತೀಶ್ ಹಾಗೂ ಚಿದಾನಂದ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.