ಉಳ್ಳಾಲ:(ಮಂಗಳೂರು) ; ನಾಲ್ಕು ತಲೆಮಾರಿನೊಂದಿಗೆ ಸಂತೃಪ್ತಿಯ ಬದುಕು ನಡೆಸಿದ ಇರಾ ಗ್ರಾಮದ ಪಿಲಿ ಪಂಜರ ನಿವಾಸಿ ಖ್ಯಾತ ಸೂಲಗಿತ್ತಿ, ಶತಾಯುಷಿ ಹಿರಿಯಜ್ಜಿ ಕಲ್ಯಾಣಿ (108)ಇಂದು ವಯೋ ಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು.
ಹಿಂದೆ ಕೃಷಿ ಕಾಯಕ ಮಾಡುತ್ತಿದ್ದ ಕಲ್ಯಾಣಿ ಅವರು ಖ್ಯಾತ ಸೂಲಗಿತ್ತಿಯಾಗಿದ್ದರು.ಆಸ್ಪತ್ರೆಗಳೇ ಇಲ್ಲದ ಅಂದಿನ ಕಾಲದಲ್ಲಿ ಇರಾ ಗ್ರಾಮ ಅಲ್ಲದೆ ಹೊರಗಿನ ಗ್ರಾಮಗಳಿಗೂ ತೆರಳಿ ಮನೆಗಳಲ್ಲೇ ಹೆರಿಗೆ ನಡೆಸುತ್ತಿದ್ದರು.ಜನರು ಶಕ್ತಿ ಅನುಸಾರವಾಗಿ ಕೊಟ್ಟ ಸಂಭಾವನೆಯಲ್ಲೇ ಕಲ್ಯಾಣಿ ಅವರು ತೃಪ್ತಿ ಪಡುತ್ತಿದ್ದರು.108 ವರುಷ ಬದುಕಿದ್ದ ಕಲ್ಯಾಣಿ ಅವರಿಗೆ 5 ಗಂಡು,ಒಂದು ಹೆಣ್ಮಗಳು ಇದ್ದು ಮೊಮ್ಮಕ್ಕಳು,ಮರಿ ಮೊಮ್ಮಕ್ಕಳು ಇದ್ದಾರೆ
ಇರಾ ಗ್ರಾಮದಲ್ಲಿ ಹಿರಿಯಜ್ಜಿ ಎಂದೇ ಖ್ಯಾತರಾಗಿ ಸಂತೃಪ್ತಿಯ ಜೀವನ ನಡೆಸಿದ ಕಲ್ಯಾಣಿ ಅವರಿಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.