ಶಿವಮೊಗ್ಗ : ಶಾಲಾ ಪ್ರವಾಸದ ಅಂಗವಾಗಿ ಗುರುವಾರ ಸಾಗರ ತಾಲೂಕಿನ ತುಮರಿ ಬಳಿ ಮೈಸೂರಿನಿಂದ ಸಿಗಂದೂರು ಕಡೆಗೆ ಹೋಗುತ್ತಿದ್ದ ಬಸ್ ಪಲ್ಟಿಯಾಗಿ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಧರ್ಮಪುರಿ ಸರ್ಕಾರಿ ಶಾಲೆಯ ಸುಮಾರು 83 ವಿದ್ಯಾರ್ಥಿಗಳು ಹೊಸನಗರ ಮಾರ್ಗವಾಗಿ ಸಿಗಂದೂರಿನ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಒಕ್ಕುಡಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ…
20 ವಿದ್ಯಾರ್ಥಿಗಳ ಪೈಕಿ 10 ಮಂದಿಗೆ ತೀವ್ರ ಗಾಯಗಳಾಗಿದ್ದು, ಸಾಗರ ಪಟ್ಟಣದ ಉಪವಿಭಾಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.