Sunday, March 16, 2025
Flats for sale
Homeಜಿಲ್ಲೆಪುತ್ತೂರು : ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವುದು ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು...!

ಪುತ್ತೂರು : ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಗೆ ಹಾನಿಗೈದಿರುವುದು ಖಂಡನೀಯ : ಕಿಶೋರ್ ಕುಮಾರ್ ಪುತ್ತೂರು…!

ಪುತ್ತೂರು : ತುಳುನಾಡಿನಲ್ಲಿ ನಾಗದೇವರಿಗೆ ವಿಶೇಷ ಪ್ರಾಧಾನ್ಯತೆ ಇದೆ. ಅದೂ ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಪುಣ್ಯಭೂಮಿಯಲ್ಲಿರುವ ನಾಗನಕಟ್ಟೆಯನ್ನು ಧ್ವಂಸಗೊಳಿಸುವುದಲ್ಲದೆ ಕೆಟ್ಟ ರೀತಿಯಲ್ಲಿ ವರ್ತಿಸಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಹೇಳಿದ್ದಾರೆ.

ಅವರು ಖಾಸಗಿ ವ್ಯಕ್ತಿಯಿಂದ ಹಾನಿಗೊಳಗಾದ ನಗರದ ಖಾಸಗಿ ಬಸ್‍ ನಿಲ್ದಾಣದ ಬಳಿ ಇರುವ ನಾಗನಕಟ್ಟೆಗೆ ಶುಕ್ರವಾರ ಭೇಟಿ ನೀಡಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಪುತ್ತೂರು ನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸಿದ ಅವರು, ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಅನ್ಯಾಯ ಆದಾಗ ಯಾವುದೇ ಕಾರಣಕ್ಕೂ ಬಿಡಬಾರದು. ಆತನಿಗೆ ತಲೆಕೆಟ್ಟಿದೆ ಎಂದಾದರೆ ಆತ ಹಿಂದೂ ದೇವಸ್ಥಾನ, ದೈವಸ್ಥಾನಗಳಿಗೆ ಯಾಕೆ ಹಾನಿ ಮಾಡಬೇಕು ಎಂದು ಪ್ರಶ್ನಿಸಿದರು.

ತಲೆ ಕೆಟ್ಟಿದೆ ಎನ್ನುವುದಕ್ಕೆ ವೈದ್ಯರು ಸರಿಯಾಗಿ ಟ್ರೀಟ್‍ ಮೆಂಟ್ ಮಾಡಬೇಕು. ಇಂತಹಾ ಘಟನೆಗಳು ಮತ್ತೆ ಮತ್ತೆ ಮರುಕಳಿಸಬಾರದು. ಈ ರೀತಿಯಾದಾಗ ಹಿಂದೂ ಸಮಾಜ ಸಹಿಸುವುದಿಲ್ಲ. ಈ ಕುರಿತು ನಾವು ಎಚ್ಚೆತ್ತುಕೊಳ್ಳಬೇಕು.ಪೊಲೀಸರು ಸರಿಯಾದ ತನಿಖೆ ನಡೆಸಿ ಆರೋಪಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಪ್ರಧಾನ ಕಾರ್ಯದರ್ಶಿ ನಾಗೇಶ್‍ ಪ್ರಭು,ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಪ್ರವೀಣ್,ಧನ್ಯ ಕುಮಾರ್‍, ಜಯಂತ ಕುಂಜೂರು ಪಂಜಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular