ಪುತ್ತೂರು ; ರಸ್ತೆಯಲ್ಲಿ ಕಾರಿಗೆ ಅಡ್ಡ ಬಂದ ಬೀದಿ ನಾಯಿಯೊಂದು ಸುಮಾರು 70 ಕಿ.ಮೀ ಕ್ರಮಿಸಿ ಕಾರಿನ ಬಂಪರ್‌ನೊಳಗೆ ಬಾಕಿಯಾಗಿ ಪತ್ತೆಯಾಗಿದೆ. ಸುಬ್ರಹ್ಮಣ್ಯ ನಿವಾಸಿ ಸುಬ್ರಹ್ಮಣ್ಯ ಟಿ ಎಸ್ ಒಡೆತನದ ವಾಹನದ ಬಂಪರ್‌ಗೆ ನಾಯಿ ಸಿಲುಕಿದ್ದರಿಂದ ಈ ವಿಲಕ್ಷಣ ಘಟನೆ ನಡೆದಿದೆ.
ಸುಬ್ರಹ್ಮಣ್ಯ ಕುಟುಂಬ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ತೆರಳುತ್ತಿದ್ದ ವೇಳೆ ಈ ಅಪರೂಪದ ಘಟನೆ ನಡೆದಿದೆ.
ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ಸುಬ್ರಹ್ಮಣ್ಯ ಕೂಡಲೇ ಕಾರು ನಿಲ್ಲಿಸಿ ಪರಿಶೀಲಿಸಿದರೂ ನಾಯಿ ಪತ್ತೆಯಾಗಲಿಲ್ಲ. ನಾಯಿ ಓಡಿ ಹೋಗಿರಬೇಕು ಎಂದುಕೊಂಡು ಮನೆ ತಲುಪುವವರೆಗೂ ವಾಹನ ಚಲಾಯಿಸುತ್ತಲೇ ಇದ್ದ.
ಮನೆಗೆ ತಲುಪಿದ ಬಳಿಕ ಕಾರನ್ನು ಪರಿಶೀಲಿಸಿದಾಗ ಬಂಪರ್‌ನಲ್ಲಿ ನಾಯಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಮೆಕ್ಯಾನಿಕ್‌ಗೆ ಕರೆ ಮಾಡಿ ನಾಯಿಯನ್ನು ಹೊರಕ್ಕೆ ತಂದರು.