Sunday, March 16, 2025
Flats for sale
Homeಜಿಲ್ಲೆಮಂಗಳೂರು : ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಕ್ಷೇತ್ರದಲ್ಲಿ ವ್ಯಾಪಾರದ ಧರ್ಮದಂಗಲ್!

ಮಂಗಳೂರು : ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಕ್ಷೇತ್ರದಲ್ಲಿ ವ್ಯಾಪಾರದ ಧರ್ಮದಂಗಲ್!

ಮಂಗಳೂರು : ಅನ್ಯಧರ್ಮೀಯರ ವ್ಯಾಪಾರ ಬಹಿಷ್ಕರಿಸಿ ದೇವಸ್ಥಾನದಲ್ಲಿ ಬ್ಯಾನರ್ ಅಳವಡಿಸಿದ ಘಟನೆ ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ .

ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ಪಡೆದು ಬ್ಯಾನರ್ ಹಾಕಿದ ವಿಎಚ್ ಪಿ-ಭಜರಂಗದಳ ‘ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಗಳಲ್ಲಿ ವಿಶ್ವಾಸ ಉಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರ ಅವಕಾಶ’ಎಂದು ಬರೆಯಲಾಗಿದೆ .

‘ವಿಗ್ರಹಾರಧನೆ ಹರಾಂ ಎಂದು ನಂಬಿದ ಯಾರಿಗೂ ವ್ಯಾಪಾರದ ಅವಕಾಶವಿಲ್ಲ’ ಎಂದು ಬ್ಯಾನರ್ ನಲ್ಲಿ ವಿಶ್ಲೇಷಿಸಲಾಗಿದೆ.

ಇಂದಿನಿಂದ ಜ.18ರ ವರೆಗೆ ನಡೆಯಲಿರುವ ಕಾವೂರು ಜಾತ್ರೋತ್ಸವ ಈಗಾಗಲೇ ದೇವಸ್ಥಾನದ ಒಳ ಮತ್ತು ಹೊರ ಭಾಗದಲ್ಲಿ ಸ್ಟಾಲ್ ಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಧಾರ್ಮಿಕ ದತ್ತಿ ವ್ಯಾಪ್ತಿಗೆ ಒಳಪಡುವ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ದೇವಸ್ಥಾನದ ಸುತ್ತ ಸಿಎಆರ್ ತುಕಡಿ ಸೇರಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ .

ಹಲವು ವರ್ಷಗಳಿಂದ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದ ಜಾತ್ರೆ ಈ ಬಾರಿ ಭಜರಂಗದಳದ ಕಾರ್ಯಕರ್ತರಿಗೆ ಸ್ಟಾಲ್ ಗಳ ನಿರ್ವಹಣೆ ಉಸ್ತುವಾರಿವಹಿಸಿದ್ದಾರೆ . ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲೇ ವ್ಯಾಪಾರ ಬಹಿಷ್ಕಾರದ ನಿರ್ಧಾರವಾಗಿದೆ ಎಂದು ತಿಳಿದುಬಂದಿದೆ

RELATED ARTICLES

LEAVE A REPLY

Please enter your comment!
Please enter your name here

Most Popular