ಮಂಗಳೂರು : ಕುದ್ರೋಳಿಯ ಮೊಯ್ದೀನ್ ನಗರದ ವೆಂಕಟೇಶ ಸಾ ಮಿಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಉತ್ತರ ಪೊಲೀಸ್ ಠಾಣೆ ಎಎಸ್‌ಐ ನಾಗರಾಜ್ ಬಂಧಿಸಿದ್ದಾರೆ.
ಮಂಗಳೂರು ಬಂದರ್ ಜೆಎಂ ರಸ್ತೆಯ ನ್ಯೂ ಸ್ಟಾರ್ ಇಲೆಕ್ಟ್ರಿಕಲ್ ಅಂಗಡಿ ಎದುರಿನ ತೂಸಿಮಾನ್ ಹೌಸ್ ನಿವಾಸಿ ಇಕ್ಬಾಲ್ ಅಲಿ ಮೊಹಮ್ಮದ್ ಅಲಿಯಾಸ್ ಇಕ್ಬಾಲ್ ಅಲಿಯಾಸ್ ಅಲಿ (38) ಬಂಧಿತ ಆರೋಪಿ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.