Sunday, March 16, 2025
Flats for sale
Homeಜಿಲ್ಲೆಮಂಗಳೂರು : ಮೈಟ್ ಟೆಕ್ನಿಕಲ್ ಕಾಲೇಜ್ ; ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ ಕಲಿಕೆಯ ಜತೆಗೆ...

ಮಂಗಳೂರು : ಮೈಟ್ ಟೆಕ್ನಿಕಲ್ ಕಾಲೇಜ್ ; ಅಂತರ್ ಶಾಲಾ ಚಿತ್ರಕಲಾ ಸ್ಪರ್ಧೆ ಕಲಿಕೆಯ ಜತೆಗೆ ಚಿತ್ರಕಲೆಯಿಂದ ಪರಿಪೂರ್ಣತೆ : ದಿನೇಶ್ ಹೊಳ್ಳ.!

ಮಂಗಳೂರು : ಮಕ್ಕಳ ಕಲೆಯನ್ನು ಪ್ರೋತ್ಸಾಹಿಸುವ ನೆಲೆಯಿಂದ ಕಳೆದ 24 ವರ್ಷಗಳಿಂದ ಬಿ. ಸಿ. ರೋಡ್ ಮತ್ತು ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಟೆಕ್ನಿಕಲ್ ಹಾಗೂ ಪ್ರೊಫೆಶನಲ್ ಕಾಲೇಜ್ ನ ನೇತೃತ್ವದಲ್ಲಿ ಅಂತರ್ ಶಾಲಾ ಕಾಲೇಜು ಚಿತ್ರ ಕಲಾ ಸ್ಪರ್ಧೆ ಬಿ. ಸಿ. ರೋಡ್ ನ ಲಯನ್ಸ್ ಕ್ಲಬ್ ನಡೆಯಿತು.

ಚಿತ್ರಕಲಾವಿದ ದಿನೇಶ್ ಹೊಳ್ಳ ಅವರು ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ಕಲಿಕೆಯ ಜತೆಗೆ ಚಿತ್ರಕಲೆಯೂ ಕರಗತವಾದರೆ ಜೀವನದಲ್ಲಿ ಪರಿಪೂರ್ಣತೆ ದೊರೆಯಲು ಸಾಧ್ಯ ಎಂದರು. ಪ್ರಾಂಶುಪಾಲರಾದ ರಾಕೇಶ್ ಮತ್ತು ನಿಶ್ಮಿತ ರಾಕೇಶ್, ಮುಖ್ಯ ಶಿಕ್ಷಕ ಅಶ್ರಫ್, ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕಿ ಚಾಂದಿನಿ ಮತ್ತು ನಾಯಕ ಮಿಥುನ್ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಸುಷ್ಮಾ ನಿರೂಪಿಸಿದರು. ಪ್ರೀಮಲ್ ಪ್ರಸ್ತಾವಿಸಿದರು. ಸ್ವಾತಿ ಅವರು ಅತಿಥಿ ಪರಿಚಯ ಮಾಡಿದರು. ನಿಶ್ಮಿತ ವಂದಿಸಿದರು.

ಎರಡು ವಿಭಾಗಗಳಲ್ಲಿ ನಡೆಸಲಾದ ಈ ಸ್ಪರ್ಧೆಯಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೈ. ಎನ್. ತಾರನಾಥ ಆಚಾರ್ಯ ಮತ್ತು ಸತೀಶ್ ಪಂಜ ತೀರ್ಪುಗಾರರಾಗಿದ್ದರು.
ಬಹುಮಾನ ವಿತರಣಾ ಸಮಾರಂಭದ ನಿರೂಪಣೆಯನ್ನು ಶಿಕ್ಷಕಿ ಗೀತಾ ನಡೆಸಿದರು. ಸ್ವಾತಿ ವಂದಿಸಿದರು.
ಫಲಿತಾಂಶ ಪ್ರೌಢಶಾಲಾ ವಿಭಾಗಲ್ಲಿ ಪೂರ್ವಿಕ ಎಮ್. ಡಿ – ಸರಕಾರಿ ಪ್ರೌಢಶಾಲೆ ಕಾವಲಕಟ್ಟೆ ತೃತೀಯ, ಸ್ಪಂದನ ಜೆ. ಶೆಟ್ಟಿ – ಎಸ್. ವಿ. ಎಸ್ ಬಂಟ್ವಾಳ ದ್ವಿತೀಯ, ಮೆಹಕ್ ಫಾತಿಮ – ವಿದ್ಯಾರತ್ನ ಆಂಗ್ಲ ಮಾಧ್ಯಮ ದೇರಳಕಟ್ಟೆ ಪ್ರಥಮ ಸ್ಥಾನ ಪಡೆದರು.

ಕಾಲೇಜು ವಿಭಾಗದಲ್ಲಿ ಪ್ರಣತಿ – ಸರಕಾರಿ ಪಿ. ಯು ಕಾಲೇಜು ಸಿದ್ದಕಟ್ಟೆ ತೃತೀಯ, ಎಂ. ಕೀರ್ತನ್ – ಗುರುದೇವ ಫಸ್ಟ್ ಗ್ರೇಡ್ ಕಾಲೇಜು ಬೆಳ್ತಂಗಡಿ ದ್ವಿತೀಯ, ದಿಶನ್ – ದಯಾನಂದ ಪೈ ಕಾಲೇಜು ಕಾರ್ ಸ್ಟ್ರೀಟ್ – ಪ್ರಥಮ ಸ್ಥಾನ ಪಡೆದಿದ್ದಾರೆ. ಸಮಾಧಾನಕರ ಬಹುಮಾನವನ್ನು ರಿತೇಶ್ ಎಸ್. ಕೆ – ಸರಕಾರಿ ಪ್ರೌಢಶಾಲೆ ಕೋಯಿಲ, ರಿಫ್ಕ ಫಾತಿಮ – ತೌಹೀದ್ ಬಂಟ್ವಾಳ, ಮೋಯಿದೀನ್ ಶಮೀರ್ – ಕಾರ್ಮೆಲ್ ಕಾಲೇಜು, ಪವನ್ ಶೆಟ್ಟಿ – ಯುನಿವರ್ಸಿಟಿ ಕಾಲೇಜ್ ಮಂಗಳೂರು, ಪ್ರೀತಿ – ಕೊಲೊಸೋ ಕಾಲೇಜ್ ಕಂಕನಾಡಿ, ಪ್ರಥಮ್ – ಕಾರ್ಮೆಲ್ ಕಾಲೇಜ್, ಆಯಿಶತ್ತುಲ್ ಮಹಸಿನ – ಬೆಸೆಂಟ್ ಕಾಲೇಜ್, ನಿಶಾ – ಕಾರ್ಮೆಲ್ ಕಾಲೇಜು, ಫಾತಿಮತ್ ನುಹ – ವಿದ್ಯಾರತ್ನ ಆಂಗ್ಲ ಮಾಧ್ಯಮ ದೇರಳಕಟ್ಟೆ, ಸೈನ ಪ್ರಿನ್ಸಿಟ ಮಿಸ್ಕ್ವಿತ್ – ಕಾರ್ಮೆಲ್ ಪಿ. ಯು ಕಾಲೇಜು ಪಡೆದುಕೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular