ಮಂಗಳೂರು: ಕಂಕನಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದ 150ನೇ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ಶುಕ್ರವಾರ ಬೆಳಗ್ಗಿನಿಂದ ಅಷ್ಟನಾರಿಕೇಳ. ಗಣಪತಿ ಹೋಮ, ದುರ್ಗಾನಮಸ್ಕಾರ ಪೂಜೆ ನಡೆಯಿತು.


ಬೆಳಗ್ಗೆ 7ಕ್ಕೆ ಅಷ್ಟ ನಾರಿಕೇಳ ಗಣಪತಿ ಹೋಮ ಆರಂಭವಾಗಿ ಮಧ್ಯಾಹ್ನ ಪೂರ್ಣಾಹುತಿಗೊಂಡಿತು.ಸಂಜೆ 5 ರಿಂದ ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ, ಅನ್ನಪ್ರಸಾದ ವಿತರಣೆ ನೆರವೇರಿತು.
ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಕಂಕನಾಡಿ 150ರ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ.ಮೋಹನ ಉಜ್ಜೋಡಿ, ಮೊಕ್ತೇಸರರಾದ ದಿವರಾಜ್, ದಿನೇಶ್ ಅಂಚನ್, ವಿಠಲ್, ಜೆ. ಕಿಶೋರ್ ಕುಮಾರ್, ಜಗದೀಪ್ ಡಿ. ಸುವರ್ಣ, ಎ. ವಾಮನ, ಜೆ.ವಿಜಯ, ದಾಮೋದರ ನಿಸರ್ಗ, ಕ್ಷೇತ್ರದ ಸಿಬ್ಬಂದಿ ಸಂದೀಪ್ ಗರೋಡಿ ಉಪಸ್ಥಿತರಿದ್ದರು.
11ರಂದು ಕಾರ್ಯಾಲಯ ಉದ್ಘಾಟನೆ: ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಕಾರ್ಯಾಲಯ ಡಿ.11ರಂದು ಬೆಳಗ್ಗೆ 9 ಗಂಟೆಗೆ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ. ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ವಿಶ್ವ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಊರ್ಮಿಳಾ ರಮೇಶ್, ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನ ಉಪಾಧ್ಯಕ್ಷ ಎ.ಕೃಷ್ಣಮೂರ್ತಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆ.ಪಿ.ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕಂಕನಾಡಿ 150ರ ಸಂಭ್ರಮ ಸಮಿತಿ ಪ್ರಧಾನ ಸಂಚಾಲಕ ಎಂ.ಮೋಹನ ತಿಳಿಸಿದ್ದಾರೆ.