ಉಳ್ಳಾಲ:ನ.17
ರಾ.ಹೆ 66 ರ ಜಪ್ಪಿನ ಮೊಗರು ಹೆದ್ದಾರಿ ಈಗ ಕತ್ತಲಾಗುತ್ತಿದ್ದಂತೆ ರೆಡ್ ಲೈಟ್ ಏರಿಯಾ ಆಗಿ ಮಾರ್ಪಡುತ್ತಿದ್ದು,ಸಭ್ಯ ನಾಗರಿಕರು ನಾಚುವ ಸ್ಥಿತಿ ಉಂಟಾಗಿದೆ.ಕತ್ತಲಾಗುತ್ತಿದ್ದಂತೆ ಮಂಗಳ ಮುಖಿಯರು ಟ್ರಾಫಿಕ್ ಪೊಲೀಸ್ ಠಾಣೆ ಬಳಿಯ ಹೆದ್ದಾರಿ ಅಂಚಿನಲ್ಲಿ ಗ್ರಾಹಕರನ್ನ ಸೆಳೆದು ಖಲ್ಲಂ,ಖುಲ್ಲ ವೇಷ್ಯಾವಟಿಕೆ ಧಂದೆ ನಡೆಸುತ್ತಿದ್ದಾರೆ.
ಕಳೆದ ಕೆಳ ತಿಂಗಳಿನಿಂದ ಜಪ್ಪಿನ ಮೊಗರು ಹೆದ್ದಾರಿಯ ಇಬ್ಬದಿಗಳಲ್ಲಿ ಮಂಗಳ ಮುಖಿಯರು ಖುಲ್ಲಂ,ಖುಲ್ಲ ಗ್ರಾಹಕರನ್ನ ಸೆಳೆದು ವೇಷ್ಯಾವಟಿಕೆ ಧಂದೆ ನಡೆಸುತ್ತಿದ್ದಾರೆ.ಹೆದ್ದಾರಿಯಲ್ಲಿ ಸಂಚರಿಸೋ ಸರಕು ಲಾರಿಗಳ ಚಾಲಕ,ಕ್ಲೀನರ್ ಗಳೇ ಈ ಮಂಗಳಮುಖಿಯರ ಪ್ರಮುಖ ಗಿರಾಕಿಗಳು.ಇವರಲ್ಲದೆ ದಾರಿಯಲ್ಲಿ ಹೋಗೋ ಕೆಲ ಸ್ಥಳೀಯ ವಾಹನ ಸವಾರರೂ ಮಂಗಳಮುಖಿಯರ ವಯ್ಯಾರಕ್ಕೆ ಮಾರು ಹೋಗಿ ಹೆದ್ದಾರಿ ವೇಶ್ಯಾವಾಟಿಕೆ ಗಿರಾಕಿಗಳಾಗುತ್ತಿದ್ದಾರೆ.ಸಣ್ಣ ಮಿಡಿ,ಸ್ಕರ್ಟ್ ಹಾಕಿ ಹೆದ್ದಾರಿ ಬದಿಯಲ್ಲಿ ನಿಂತು ಯುವತಿಯರಂತೆಯೇ ಮೈಮಾಟ ತೋರಿಸುವ ಮಂಗಳ ಮುಖಿಯರಿಗೆ ಸ್ಥಳೀಯರೂ ಮಿಕಗಳಾಗುತ್ತಿದ್ದಾರೆ
ಕೆಲವರು ಮಂಗಳ ಮುಖಿಯರಿಂದ ಮೋಸ ಹೋಗಿ ಅಮೂಲ್ಯ ಸೊತ್ತುಗಳನ್ನೂ ಕಳಕೊಂಡಿದ್ದಾರಂತೆ.ರಾತ್ರಿ ಹೊತ್ತಲ್ಲಿ ಕುಟುಂಬ ಸಮೇತರಾಗಿ ಈ ಪ್ರದೇಶದಲ್ಲಿ ಸಂಚರಿಸುವವರು ಮಂಗಳ ಮುಖಿಯರ ಖುಲ್ಲಂ,ಖುಲ್ಲ ವೇಷ್ಯಾವಾಟಿಕೆ ಕಂಡು ನಾಚುವಂತಾಗಿದೆ.ರಾತ್ರಿ ವೇಳೆ ಹೆದ್ದಾರಿ ಅಂಚಿನಲ್ಲಿ ಕೆಲ ಮಂಗಳ ಮುಖಿಯರು ಶ್ವೇತ ವರ್ಣದ ಬಟ್ಟೆ ಧರಿಸಿ ನಿಲ್ಲುತ್ತಿದ್ದು,ಸೂಕ್ಷ್ಮ ಮನಸ್ಸಿನವರು ಇವರನ್ನ ಕಂಡು ದೆವ್ವ,ಮಾಸ್ತಿಯೆಂದು ಗ್ರಹಿಸಿ ಭಯ ಬಿದ್ದಿರೋ ಘಟನೆಗಳೂ ನಡೆದಿವೆ.
ವಿಶೇಷವೆಂದರೆ ಈ ಇರುಳು ವೇಷ್ಯಾ ಧಂದೆ ಜಪ್ಪಿನ ಮೊಗರಲ್ಲಿ ಇರುವ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಅಂಗಳದಲ್ಲೇ ನಿತ್ಯ ನಿರಂತರ ನಡೆಯುತ್ತಿದ್ದರೂ ಧಂದೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿಲ್ಲ.
ವೇಶ್ಯಾವಟಿಕೆ ಸೋಗಲ್ಲಿ ಮಂಗಳ ಮುಖಿಯರು ದರೋಡೆ ,ಇತರ ಅಪರಾಧ ಕೃತ್ಯಗಳನ್ನ ನಡೆಸೋ ಮೊದಲು ಪೊಲೀಸ್ ಇಲಾಖೆ ಜಾಗೃತಗೊಂಡು ಹೆದ್ದಾರಿಯಲ್ಲಿ ನಡಯುತ್ತಿರುವ ಮಂಗಳ ಮುಖಿಯರ ಮಾಂಸ ಧಂದೆಗೆ ಕಡಿವಾಣ ಹಾಕಬೇಕಿದೆ.