ಮಂಗಳೂರು: ಮಧ್ಯರಾತ್ರಿ 12ರ ಬಳಿಕ ಮುಸ್ಲಿಂ ಹುಡುಗರ ಜೊತೆ ಹಿಂದೂ ಯುವತಿಯರು ಜಾಲಿ ತಿರುಗಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ಅವರನ್ನುತಡೆದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನ ಕೊಟ್ಟಾರ ಸಮೀಪ ನಡೆದಿದೆ.
ಮುಸ್ಲಿಂ ಯುವಕರ ಜೊತೆ ಇದ್ದ ಇಬ್ಬರು ಹಿಂದೂ ಯುವತಿಯರು ಅಪರಾತ್ರಿ ಜಾಲಿ ಮೂಡಲ್ಲಿ ಸುತ್ತಾಡುತ್ತಿದ್ದರು. ಇದನ್ನು ಗಮನಿಸಿದ ಬಜರಂಗಿಗಳು ರೆಡ್ ಹ್ಯಾಂಡ್ ಆಗಿ ಹಿಡಿದ ಪೊಲೀಸರನ್ನ ಕರೆಸಿದ್ದಾರೆ.
ಪೊಲೀಸರು ಪ್ರಶ್ನಿಸಿದಾಗ ಹಿಂದೂ ಮುಸ್ಲಿಂ ಜೋಡಿ ನಾವು ಹೋಟೆಲ್ ಗೆ ಊಟಕ್ಕೆಂದು ಬಂದಿದ್ದೇವೆ ಎಂದು ಪೆಂಗರಂತೆ ಉತ್ತರಿಸಿದ್ದಾರೆ.
ಇದರಿಂದ ಅನುಮಾನಗೊಂಡ ಬಜರಂಗದಳ ಕಾರ್ಯಕರ್ತರು, ಅಷ್ಟಕ್ಕೂ ಇಷ್ಟು ತಡರಾತ್ರಿಗೆ ಯಾವ ಹೋಟೆಲ್ ಓಪನ್ ಇದೆ ಎಂದು ತೋರಿಸಿ ಎಂದು ಆ ಯುವಕ ಯುವತಿಯರಲ್ಲಿ ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಲು ಜೋಡಿ ತಡಕಾಡಿದಾಗ ರಾತ್ರಿ 12ರ ಬಳಿಕ ಕೊಟ್ಟಾರದಲ್ಲಿ ಯಾವೂದಾದ್ರೂ ಹೋಟೆಲ್ ಓಪನ್ ಇದ್ದರೆ ತಿಳಿಸಿ ಎಂದರು. ಇದಕ್ಕೆ ಉತ್ತರಿಸಲಾಗದ ಜೋಡಿಗಳ ವರ್ತನೆಯನ್ನು ನೋಡಿದಾಗ ಇವರ ವರ್ತನೆ ಅನುಮಾನ ಮೂಡಿಸಿದೆ.
ಪೊಲೀಸರು ಇದರ ಬಗ್ಗೆ ಕೂಡಲೇ ಗಮನಿಸಬೇಕು. ಅಪರಾತ್ರಿ ಈ ರೀತಿ ವರ್ತನೆ ತೋರುವ ಮಕ್ಕಳ ಬಗ್ಗೆ ಪೋಷಕರು ಗಮನಿಸಬೇಕು. ಹೆಣ್ಮಕ್ಕಳು ಹೀಗೆ ಯುವಕರ ಜೊತೆ ಅಪರಾತ್ರಿ ಅನುಮಾನ ಬರುವ ಹಾಗರ ಸುತ್ತಾಡುವುದರ ಬಗ್ಗೆ ಪೋಷಕರು ನಿಗಾವಹಿಸಿ ಸಂಸ್ಕಾರ ಕಲಿಸಬೇಕು ಎಂದು ಬಜರಂಗದಳ ಕಾರ್ಯಕರ್ತರು ಆಗ್ರಹಿಸಿದರು.
ಪದೇ ಪದೇ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕಂಡುಬರುತ್ತಿದ್ದರೂ, ಪೊಲೀಸ್ ಇಲಾಖೆ ಇನ್ನೂ ಮೌನವಹಿಸಿದೆ. ಜೊತೆಗೆ ಲವ್ ಜಿಹಾದ್ ನಂತಹಾ ಪ್ರಕರಣಗಳ ಬಗ್ಗೆ ಸೂಕ್ಷ್ಮವಾಗಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಅನಾಹುತ ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಬಜರಂಗದಳ ಕಾರ್ಯಕರ್ತರು ಕೂಡ ಜೋಡಿಗಳ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಆದರೆ ಇದೊಂದು ಲವ್ ಜಿಹಾದ್ ಎಂಬ ಆರೋಪವನ್ನು ಹಿಂದೂ ಸಂಘಟನೆಗಳು ಮಾಡಿದೆ.