ಉಳ್ಳಾಲ : ಪೊಲೀಸ್ ಇನ್ಸ್ ಪೆಕ್ಟರನ್ನೂ ಬಿಡದ ಹೈಟೆಕ್ ರಾಬರ್ಸ್ ಗಳು ,ಉಳ್ಳಾಲ ಪಿಐ ಸಂದೀಪ್ ಅವರ ಹೆಸರಲ್ಲಿ ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆರೆದು ಸಂದೀಪ್ ಅವರ ಸ್ನೇಹಿತರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಉದ್ಯಮಿಗಳು,ನಟರು,ಖ್ಯಾತ ನಾಮರು,ಪತ್ರಕರ್ತರು,ಪೊಲೀಸರ ಹೆಸರಲ್ಲಿ ನಕಲಿ ಖಾತೆಗಳನ್ನ ತೆರೆದು ಹಣ ಲಪಟಾಯಿಸುವ ಹೈಟೆಕ್ ಧಂದೆ ಪ್ರಕರಣಗಳು ಜಾಸ್ತಿಯಾಗುತ್ತಿವೆ.
ಕಳೆದ ಎರಡು ವರುಷಗಳಿಂದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಐ ಸಂದೀಪ್ ಅವರ ಹೆಸರಲ್ಲೂ ಹೈಟೆಕ್ ರಾಬರ್ಸ್ ನಕಲಿ ಇನ್ಸ್ಟಾ ಗ್ರಾಮ್ ಖಾತೆ ತೆರೆದು ಸಂದೀಪ್ ಅವರ ಸ್ನೇಹಿತರಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.ವಿಶೇಷ ಎಂದರೆ ನಕಲಿ ಖಾತೆ ತೆರೆದವ ಸಂದೀಪ್ ಅವರ ಇನ್ಸ್ಟಾ ಗ್ರಾಮ್ನ ಬಹುತೇಕ ಸ್ನೇಹಿತರಲ್ಲಿ ಸೋಗಲಾಡಿ ಕಾರಣ ಹೇಳಿ 7,500 ರೂಪಾಯಿಗಳನ್ನೆ ಕೇಳಿದ್ದಾನೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ,ಇನ್ಸ್ಟಾಗ್ರಾಮ್ ಗಳಲ್ಲಿ ಈ ಹಿಂದೆನೂ ಬಹುತೇಕ ಜನರ ನಕಲಿ ಖಾತೆಗಳನ್ನ ತೆರೆದು ಅವರ ಸ್ನೇಹಿತರಲ್ಲಿ ಹೈಟೆಕ್ ರಾಬರ್ಸ್ ಗಳು ಹಣ ಲಪಟಾಯಿಸಿದ ಬಗ್ಗೆ ಅನೇಕ ಪ್ರಕರಣಗಳು ನಡೆದಿವೆ.ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳೂ ದಾಖಲಾಗಿದ್ದರೂ ಯಾವುದೇ ಪರಿಣಾಮ ಬೀರಿಲ್ಲ.
ಆದರೀಗ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳನ್ನೇ ಹೈಟೆಕ್ ರಾಬರ್ಸ್ ಗಳು ಟಾರ್ಗೆಟ್ ಮಾಡಿರುವುದು ವಿಪರ್ಯಾಸ.ಇನ್ನಾದರೂ ಸಂಬಂಧ ಪಟ್ಟ ಸೈಬರ್ ಕ್ರೈಮ್ನ ಪೊಲೀಸರು ಎಚ್ಚೆತ್ತು ಜಾಲತಾಣಗಳ ಹೈಟೆಕ್ ರಾಬರ್ಸ್ ಗಳ ಹೆಡೆಮುರಿ ಕಟ್ಟುತ್ತಾರ ಎಂಬುದು ಸವಾಲಾಗಿದೆ.