ಮಂಗಳೂರು ; ಕುದ್ರೋಳಿ ದೇವಸ್ಥಾನದ ಮುಂಭಾಗ ರಥಕ್ಕೆ ಬಾವುಟ ನೀಡಿ ಪಾದಯಾತ್ರೆಗೆ ನಾರಾಯಣ ಗುರು ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಚಾಲನೆ ನೀಡಿದ್ದಾರೆ.
ಬಿಲ್ಲವ ಸಮಾಜದ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ,ಬಿಲ್ಲವ, ಈಡಿಗ, ನಾಮಧಾರಿ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಇಂದು ಮಂಗಳೂರಿನಿಂದ ಹೊರಟು 41 ದಿನಗಳ ಕಾಲ 658 ಕಿ.ಮೀ ಪಾದಯಾತ್ರೆ ಸಾಗಲಿದೆ.
ಜನಾರ್ದನ ಪೂಜಾರಿ, ಚಿತ್ರನಟರಾದ ಸುಮನ್ ತಲ್ವಾರ್, ರಾಜಶೇಖರ ಕೋಟ್ಯಾನ್, ತೆಲಂಗಾಣ ಸರ್ಕಾರದ ಸಚಿವ ಶ್ರೀನಿವಾಸ್, ಎಂಎಲ್ ಸಿ ಹರೀಶ್ ಕುಮಾರ್ ಸೇರಿ ಹಲವರು ಭಾಗಿಯಾಗಿದ್ದರು
ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದ ಹಲವು ಜಿಲ್ಲೆಯ ಪ್ರಮುಖರು ಭಾಗಿಯಾಗಿದ್ದರು
ನಾರಾಯಣ ಗುರು ನಿಗಮ ಸ್ಥಾಪನೆ, ಸೇಂದಿ ಇಳಿಸಿ ಮಾರಾಟಕ್ಕೆ ಅವಕಾಶ, ಬಿಲ್ಲವರ ಮೀಸಲಾತಿ ಹೆಚ್ಚಳ,ಇದು ರಾಜಕೀಯ ಪ್ರಾತಿನಿಧ್ಯದ ಪ್ರಮುಖ ಬೇಡಿಕೆಯಾಗಿದೆ.