ಕಮಲಪಕ್ಷದ ನಾಯಕರ ಬದಲಾದ ಕಾಲದ ಗುಣಗಾನ!
ಪ್ರಖರ ಹಿಂದುತ್ವದ ಮುತಾಲಿಕರ ವೀರ ಭಾಷಣ, ಹೋದೆಡೆ ಮಾನ ಸನ್ಮಾನ, ಕಾಂಗ್ರೆಸ್ ವಿರುದ್ದ ಟೀಕಾ ಬಾಣ ವೀರಪ್ಪ ಮೊಯ್ಲಿಯೂ ಸಹಿತ, ಕೈ ನಾಯಕರಿಗೆ ಭಾಷಣಗಳಲ್ಲಿ ಅವಮಾನ..
ಬದಲಾದ ಕಾಲದಲ್ಲಿ ..
ಮುತಾಲಿಕರಿಗೆ ಅವಮಾನ, ವೀರಪ್ಪ ಮೊಯ್ಲಿಗೆ ಆಗಾಗ ಸಮ್ಮಾನ..
ಇದು ಕಾರ್ಕಳದ ಕಮಲಪಕ್ಷದ ನಾಯಕರ ಬದಲಾದ ಕಾಲದ ಕುರಿತು ಅನಿವಾರ್ಯವಾಗಿ ಪೆನ್ನು ಕೈಗೆತ್ತಿ ಒಲ್ಲದ ಮನಸ್ಸಿಂದ ವಿಮರ್ಶೆ ಮಾಡಲೇಬೇಕಾದ ಕ್ಷಣ.
ಮುಂದೆ ಓದಿ..
ಬ್ಯಾಂಕಲ್ಲಿ ಸ್ವಂತ ಖಾತೆ ಇಲ್ಲ, ಬಾಡಿಗೆ ಮನೆಯಲ್ಲಿ ವಾಸ, ಜಮೀನು- ಆಸ್ತಿ ಇಲ್ಲ!
ಊರಿಗೆ ಹೋದಾಗ ಅಲ್ಲಿರುವ ಹಿತೈಷಿಗಳಿಂದಲೇ ವಸತಿ ವ್ಯವಸ್ಥೆ ಕಾರ್ಯಕರ್ತರಿಂದ ಊಟ, ತಿಂಡಿ ವ್ಯವಸ್ಥೆ. ಬಟ್ಟೆ ಬರೆ, ಪ್ರವಾಸವೂ ಕೂಡಾ ಹಿತೈಷಿಗಳದ್ದೇ.. !
ಪ್ರಮೋದ್ ಮುತಾಲಿಕ್ ವಿಚಾರಧಾರೆಗಳ ಕುರಿತು ಅದನ್ನು ಜಾರಿಗೊಳಿಸುವ ವಿಧಾನದ ಕುರಿತು ಆಕ್ಷೇಪಗಳಿರಬಹುದು. ಆದರೆ ಮುತಾಲಿಕ್ ತನ್ನ ನಂಬಿದ ಸಿದ್ಧಾಂತಕ್ಕಾಗಿ ಬದುಕನ್ನು ಮುಡಿಪಾಗಿಟ್ಟ ಬಗೆ ಮತ್ತು ಅದಕ್ಕಾಗಿನ ಅವರ ನಿಷ್ಠೆ ಮಾತ್ರ ಪ್ರಶ್ನಾತೀತ !
ವಿಚಿತ್ರ ನೋಡಿ…! ಅಂದು ಮುತಾಲಿಕರ ಭಾಷಣಗಳಿಂದ ಯಾರು ಬದುಕು ಕಟ್ಟಿಕೊಂಡರೋ ಅವರೇ ಇಂದು ಹೀಗಳೆಯುತ್ತಾ, ಅವರ ಹಿಂದುತ್ವವನ್ನು ಹೀನಾಯವಾಗಿ ಆಡಿಕೊಳ್ಳುತ್ತಿದ್ದಾರೆ.
ಅಬ್ಬಾ.. ಸಮಾಜದಲ್ಲಿ ಅಧಿಕಾರ ಹಪಾಹಪಿಯ ಸ್ಪರ್ಧೆಯಲ್ಲಿ ಎಷ್ಟೊಂದು ತಣ್ಣಗಿನ ಕ್ರೌರ್ಯವಿದೆ.. ಇದೇ ಭಾವ ಅಷ್ಟೇ ನನ್ನನ್ನು ಕಾಡುತ್ತಿರುತ್ತದೆ.
ಮುತಾಲಿಕ್ ಒಂದು ರೀತಿಯಲ್ಲಿ ಸ್ಪಿರಿಟ್ ಇದ್ದಂತೆ ! ಇದೇ ಸ್ಪಿರಿಟ್ ಗೆ ಸೇವೆ, ಸಂಸ್ಕಾರಗಳ ದ್ರವ ಬೆರೆಸಿ ಹದವರಿತು ಮಿಶ್ರಣ ಮಾಡಿಕೊಂಡು ಯುವ ಜನತೆಗೆ ನೀಡುತ್ತಾ ಹಿಂದುತ್ವ ಬೆಲ್ಟ್‌ಗಳಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದಂತೂ ಸುಳ್ಳಲ್ಲ.
ಈಗ ಅಧಿಕಾರ ಗದ್ದುಗೆ ಹಿಡಿದ ಬಳಿಕ ಹಳೆಯ ಸ್ಪಿರಿಟ್ ಮಿಕ್ಸ್ ಮಾಡುವ ವಿಧಾನದ ಅಗತ್ಯ ಇಲ್ಲವೋ ಅಥವಾ ಹೊಸ ಬ್ರ್ಯಾಂಡ್ ಯಥೇಚ್ಛ ಲಭ್ಯ ಇರುವ ಕಾರಣಕ್ಕೋ ಸ್ಪಿರಿಟ್ ಇಟ್ಟುಕೊಂಡರೆ ತಮ್ಮನ್ನೇ ಸುಟ್ಟುಬಿಡಬಹುದು ಎಂಬ ಆತಂಕವೋ… ಒಟ್ಟಾರೆ ಮುತಾಲಿಕ್ ರಾಜಕಾರಣಿಗಳಿಗೆ ಬೇಡವಾಗಿದ್ದಾರೆ.
೮ ವರ್ಷಗಳ ಹಿಂದೆ ಬಿಜೆಪಿ ಸೇರಿ ೮ ಗಂಟೆಗಳಲ್ಲಿಯೇ ಬಿಜೆಪಿಯಿಂದ ಹೊರ ದಬ್ಬಿಸಿಕೊಳ್ಳಬೇಕಾದ ದಾರುಣ ಪರಿಸ್ಥಿತಿ ! ಮಾಧ್ಯಮಗಳಲ್ಲಿ ತೀವ್ರ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತಾದರೂ ಪ್ರಧಾನಿ ಮೋದಿ ವಿರುದ್ಧ ಇದಕ್ಕಿಂತಲೂ ಹೆಚ್ಚು ಟೀಕೆಗಳು ಅಭಿಯಾನಗಳೂ ನಡೆದಿರುವುದನ್ನು ನಾವು ನೋಡಿದ್ದೇವೆ.
ಮುತಾಲಿಕ್ ಪ್ರಖರ ಭಾಷಣಕಾರರಾಗಿರಬಹುದು ಆದರೆ ಅದೇ ರೀತಿ ಆಡಳಿತದಲ್ಲಿ ನಿಸ್ಸೀಮರು ಎನ್ನಲು ಸಾಧ್ಯವಿಲ್ಲ.
ಆದರೂ ಕೃತಜ್ಞತೆ ರೂಪದಲ್ಲಿ ಅವರಿಗೊಂಡು ಗೌರವದ ಹುದ್ದೆಯನ್ನು ಮಾತ್ರ ಇಷ್ಟರಲ್ಲಿ ನೀಡಬೇಕಾಗಿತ್ತು.
ಈಗ ಅವರಿಗೆ ೬೮ ವರ್ಷ ! ರಾಜಕೀಯದಲ್ಲಿ ಈ ಬಾರಿ ಮಾತ್ರ ಅವರು ಜನಪ್ರತಿನಿಧಿ ಆಗಬಹುದು. ಅವರ ಬದುಕಲ್ಲಿ ನಿಜವಾಗಿಯೂ ಕೊನೆಯ ಅವಕಾಶ !
ಕಬ್ಬಿನ ರಸ ಹೀರಿದ ಬಳಿಕ ಜಲ್ಲೆಗಳಿಗೆ ಗೌರವಾನ್ವಿತ ವ್ಯವಸ್ಥೆ( ಮೇಲ್ಮನೆಯೋ..ಹುದ್ದೆಯೋ/ ಪ್ರಶಸ್ತಿಗಳೂ…) ಮಾಡಬೇಕಾಗಿರುವುದು ಸಂಘದ/ ಪಕ್ಷದ ಹೊಣೆ ಅಲ್ಲವೇ?
ಹುದ್ದೆ ಕೊಡುವುದು ಸಾಯ್ಲಿ.. ಇವರು ಒಂದು ಹತ್ತು ಹೆಜ್ಜೆ ಮುಂದೆ ಹೋಗಿ ಮುತಾಲಿಕರನ್ನೇ ಪ್ರತಿಬಂಧಿಸತೊಡಗಿದರು, ಹೋದಲ್ಲಿ ಪ್ರಕರಣಗಳು ದಾಖಲಾಗತೊಡಗಿದವು. ಒಂದು ಕಾಲದಲ್ಲಿ ಕಾಂಗ್ರೆಸ್ ಈ ರೀತಿಯ ಕೇಸ್ ಗಳನ್ನು ಹಿಂದುತ್ವವಾದಿಗಳ ಮೇಲೆ ಹಾಕುತ್ತಿತ್ತು, ಇದನ್ನೇ ಬಿಜೆಪಿ ಬಂಡವಾಳಮಾಡಿಕೊಂಡು ರಾಜಕೀಯ ಲಾಭ ಪಡೆದಿತ್ತು. ಇದು ಒಪ್ಪುವ ವಿಷಯವೇ .
ಆದರೆ ತನಗೆ ರಗಳೆಯಾಗುತ್ತಿರುವ ಮುತಾಲಿಕರನ್ನು ಮಣಿಸಲು ಅವರು ಗನ್ ಮ್ಯಾನ್‌ಗಳನ್ನು ಹಿಂದೆಗೆದುಕೊಂಡರು.
“ಆಗಾಗ ಗಡೀಪಾರು, ಜಿಲ್ಲೆಗೆ ಪ್ರವೇಶ ನಿರ್ಬಂಧ !”
*ಪ್ರವೀಣ್ ನೆಟ್ಟಾರ್ ಕೊಲೆ ಸಂದರ್ಭದಲ್ಲಂತೂ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಒಂದು ತಿಂಗಳ ಬಳಿಕ ಕೋರ್ಟ್ ಮೂಲಕ ತಡೆಯಾಜ್ಞೆ ತಂದು ನೆಟ್ಟಾರಿಗೆ ಬಂದು ಕುಟುಂಬದವರನ್ನು ಸಂತೈಸಿ ಹೋಗಿದ್ದರು.
*ವಿಪರ್ಯಾಸ ಎಂದರೆ ಪ್ರಖರ ಹಿಂದುತ್ವ ನಾಯಕರೆಂದು ಕರೆಸಿಕೊಂಡ ಆಡಳಿತ ಪಕ್ಷದ ನಾಯಕರು ಇದೇ ನೆಟ್ಟಾರಿನಲ್ಲಿ ತಮ್ಮದೇ ಕಾರ್ಯಕರ್ತರ ಆಕ್ರೋಶದ ಸಂದರ್ಭ ಬೆಂಬಲಿಗರ ಕಾಲ ಬಳಿ ಅಡಗಿ ಕುಳಿತು ತಮ್ಮ ಮುಖ (ಅಧಿಕಾರ) ಉಳಿಸಿಕೊಂಡರು.*
ಮುತಾಲಿಕ್ ಉ #ಗ್ರ ಹಿಂದುತ್ವ ಮೈಗೂಡಿಸಿಕೊಂಡವರು ಅವರು ಸಿದ್ಧಾಂತವನ್ನು ಒಪ್ಪಿದರೂ ವಿಚಾರಧಾರೆ ಮತ್ತು ಅದನ್ನು ಜಾರಿಗೊಳಿಸುವ ವಿಧಾನದ ಕುರಿತು ಮೃದು ಹಿಂದುತ್ವವಾದಿಗಳಿಗೆ ಆಕ್ಷೇಪಗಳಿರಬಹುದು ಆದರೆ ಅವರು ಸಿದ್ಧಾಂತಕ್ಕಾಗಿ ಬದುಕಿದ ರೀತಿಯನ್ನು ಅಣಬೆಗಳಿಗೆ ಹೋಲಿಸುವುದು… ಒಪ್ಪಬಹುದೇ ?
ಕಾರ್ಕಳದಲ್ಲಿ ವಿಜಯಕರ್ನಾಟಕದಲ್ಲಿ ವರದಿಗಾರನಾಗಿದ್ದೆ.(ಈಗ ಇಲ್ಲ) ಆಗ ಇದೇ ಪ್ರಮೋದ್ ಮುತಾಲಿಕ್ ಅನೇಕ ಹಿಂದೂ ಸಮಾವೇಶಗಳಿಗೆ ಬರುತ್ತಿದ್ದರು. ಪ್ರಖರ ಮತ್ತು ಪ್ರಮುಖ ಭಾಷಣಕಾರ ಮುತಾಲಿಕರೇ, ಭಜರಂಗದಳದಲ್ಲಿದ್ದ ಸುನಿಲ್ ಕುಮಾರ್ 5-1೦ ನಿಮಿಷದ ಚೊಕ್ಕ, ಸಿದ್ಧಸೂತ್ರದ ಭಾಷಣ ಮಾಡುತ್ತಿದ್ದರು.
ನನ್ನ ಬಳಿ ಆಗ ವಾಹನ ಇರಲಿಲ್ಲ. ಸಂಘಟಕರ ಬಳಿ ಲಿಫ್ಟ್ ಕೇಳಿ ಒಂದೆರಡು ಬಾರಿ ಮುತಾಲಿಕರ ಕಾರಿನಲ್ಲಿ (ಅವರ ಸ್ವಂತ ಕಾರು ಅಲ್ವಾಂತ) ಸಮಾವೇಶಗಳಿಗೆ ಹೋಗಿ ವರದಿ ಮಾಡಿದ ನೆನಪು ಮಾಸಿಲ್ಲ.
ವಿವೇಕಾನಂದ ಶೆಣೈ ಅಂಥಹ ಬಿಸಿರಕ್ತದ ಯುವಕರು ಬಜರಂಗದಳ ಕಟ್ಟಿದ ರೀತಿ..
ರಾಜಕೀಯ ಚಪ್ಪಲಿ ಹೊರಗಿಟ್ಟು ಬನ್ನಿ ಎಂದು ಬೈಠಕ್ ಗಳಲ್ಲಿ ಹೇಳುತ್ತಾ ಕೊನೆಗೆ ಶೆಣೈ ಅವರ ರಾಜಕೀಯದ ಚಪ್ಪಲಿಯನ್ನೇ ಇನ್ಯಾರೋ ಎಗರಿಸಿದ್ದು ಸುಳ್ಳಲ್ಲಅದೆಲ್ಲ ಬದಿಗಿರಲಿ
ಹೀಗಾಗಿ ಅಣಬೆ ಯಾರು ಅಣಬೆಗೆ ಮಸಾಲೆ ಹಾಕಿ #ಮಶ್ರೂಮ್‌ಫ್ರೈ ಮಾಡಿ ತಿಂದವರು ಯಾರು ಎನ್ನುವುದು ಇನ್ನೂ ಜಟಿಲವಾಗಿ ಕಾಡುತ್ತಿದೆ
ಮೇಲೆ ಏರಿದ ಮೇಲೆ ಏಣಿಯನ್ನು ಒದ್ದವನೇ ನಿಜವಾದ ನಾಯಕ ಎನ್ನುವಷ್ಟರ ಮಟ್ಟಿಗೆ ಕಾಲ ಬದಲಾಗಿದೆ. ಆದರೆ ಕಾಲ ಕೆಟ್ಟರೆ ಏಣಿಗಳ ರೂಪದಲ್ಲಿದ್ದವರು ಘಟಸರ್ಪಗಳಂತೆ ಕಾರ್ಕೋಟಕ ವಿಷ ಉಗುಗಳಬಹುದು. ಇದು ತಪ್ಪೆಂದು ಹೇಳಲಾಗದು.
ಬೇಕಾದ ಹಾಗೆ ಬಳಸಿಕೊಳ್ಳುವುದು ಆಮೇಲೆ ಉಂಡ ಬಾಳೆ ಎಲೆಯಂತೆ ಎಸೆಯುವುದು. ಅಗತ್ಯ ಬಿದ್ದಾಗ ಮತ್ತೆ ಒಲಿಸಿಕೊಳ್ಳೋಣ ಎಂಬ ನಾಯಕರುಗಳ ನೀತಿಯಿಂದ ದೊಡ್ಡ ಸಂಖ್ಯೆಯ ಪ್ರಭಾವಿಗಳು ಒಳಗಿಂದೊಳಗೆ ಬೇಯುತ್ತಿದ್ದಾರೆ.
ಇದೇ ಬಿಜೆಪಿಗೆ ಹಿನ್ನಡೆಯಾಗುತ್ತಿರುವುದು. ಕಾರ್ಕಳ ಒಂದು ಸ್ಯಾಂಪಲ್ ಮಾತ್ರ.
ಮುತಾಲಿಕ್ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಸಾಧ್ಯ, ಆದರೆ ಅವರ ಗೆಲುವು ವಿರೋಧಿಯ ಸೋಲಲ್ಲೂ ಇರಬಹುದು ಅಲ್ವೇ ?
ಕೆಲಸ ಮಾಡಿಸುವ ಸಾಮರ್ಥ್ಯದ ಜತೆ ನಯ-ವಿನಯವೂ ಬೇಕು. ದರ್ಪ ದುರಅಹಂಕಾರವನ್ನು ಯಾರೂ ಸಹಿಸುವುದಿಲ್ಲ. ಇದರ ಬದಲು ರಾಜಕೀಯ ಮಹತ್ವಾಕಾಂಕ್ಷೆ ಈಡೇರಿಸಲು ..
ನನ್ನ ಬಿಟ್ಟಿ ಸಲಹೆ. ದುರಹಂಕಾರದ ಬದಲು ತೋರಿಕೆ ವಿನಯ, ನಯವಂಚನೆ ಅಳವಡಿಸಿಕೊಂಡರೂ ನಾಯಕರಿಗೂ – ಪಕ್ಷಕ್ಕೂ ಲಾಭ !
ಮುಖ್ಯಮಂತ್ರಿ ಆಗುವವರು ಬೆಂಬಲಿಗರನ್ನು ಬೆಂಬಲಿಗ ಶಾಸಕರನ್ನು ಹೊಂದಿರಬೇಕು. ಆದರೆ ತನ್ನ ಪಕ್ಷದ ಕಾರ್ಯಕರ್ತರನ್ನು ಬೆಳೆಸದೇ ಕೇವಲ ಬಹುಪರಾಕ್ ಬೆಂಬಲಿಗರನ್ನು ಬೆಳೆಸಿ ಆಯಕಟ್ಟಿನ ಜಾಗದಲ್ಲಿ ಕೂರಿಸಿದರೆ ಪಕ್ಷ ಬೆಳೆಸಿದಂತಾಗುತ್ತದೆಯೇ ? ಕೊನೆಗೊಂದು ಮಾತು ಕಾರ್ಕಳದಲ್ಲಿ ಖಂಡಿತಾ ಬಿಜೆಪಿ ಸೋಲುವುದಿಲ್ಲ… ಇದೊಂದು ಅಗ್ನಿ ಪರೀಕ್ಷೆ ಅಷ್ಟೇ.. ಅದರಲ್ಲಿ ತೇರ್ಗಡೆಯಾದರೆ ಮತ್ತೆ ಮುಖ್ಯಮಂತ್ರಿ ಪಟ್ಟ…!
ಜೀತೆಂದ್ರ ಕುಂದೆಶ್ವರ.