ಚಿಕ್ಕಮಗಳೂರು : ಇವತ್ತಿನ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುವ ಪ್ರೀತಿ ತಾತ್ಕಾಲಿಕ ವದಂತಾಗಿದೆ ಪ್ರೀತಿಯ ಹೆಸರಲ್ಲಿ ಮೋಸ ಹೋಗೋದು,ಹಣದ ವಿಚಾರದಲ್ಲಿ ದ್ರೋಹಬಗೆಯುವುದು ಇದೆಲ್ಲಾ ಹೆಚ್ಚುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಚಿರಂಜೀವಿ ಎಂಬಾತ ಕಿಚ್ಚಬ್ಬಿ ಗ್ರಾಮದ ಮಹಿಳೆ ತೃಪ್ತಿ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರೇ ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿದ್ದು,ಹಲವು ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ತಿಂಗಳ ಹಿಂದೆ ಚಿರಂಜೀವಿ ಜೊತೆ ತೃಪ್ತಿ ಹೋಗಿದ್ದಳು. ವಾಪಸ್ ಬಂದ ಬಳಿಕ ಮನೆಯವರ ರಾಜಿ ಬಳಿಕ, ಆತನ ಜೊತೆ ಮಾತು ಹಾಗೂ ಸ್ನೇಹವನ್ನು ಬಿಟ್ಟಿದ್ದಳು ಎನ್ನಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ಮೂಲದ ಚಿರಂಜೀವಿ ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ವೇಳೆ ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ತೃಪ್ತಿಯೊಂದಿಗೆ ಕೆಲ ತಿಂಗಳು ನಡೆದ ಮಾತುಕತೆಯಿಂದ ಸ್ನೇಹ ಪ್ರೀತಿಗೆ ತಿರುಗಿದೆ. ಇದೇ ವೇಳೆ ಇಬ್ಬರು ಮೊಬೈಲ್ ನಂಬರ್‌ಗಳನ್ನು ಹಂಚಿಕೊಂಡು ಮಾತನಾಡಿ ಸಂಪರ್ಕ ಬೆಳೆಸಿದ್ದಾರೆ. ದಿನ ಕಳೆದಂತೆ ಇಬ್ಬರ ನಡುವಿನ ಪ್ರೀತಿ ಸಂಪರ್ಕಕ್ಕೆ ಕೊಂಡಿಯಾಗಿ ಕಳೆದ ಕೆಲವೇ ತಿಂಗಳ ಹಿಂದೆ ಇಬ್ಬರು ಬೆಂಗಳೂರಿಗೆ ಹೋಗಿದ್ದರು. ಪರಿಣಾಮ ಪತಿ, ಪತ್ನಿ ಕಾಣೆಯಾಗಿದ್ದಾಳೆ ಎಂದು ಠಾಣೆಗೆ ದೂರು ನೀಡಿದ್ದರು. ಪೊಲೀಸರ ಪರಿಶೀಲನೆ ಬಳಿಕ ಬಾಳೆಹೊನ್ನೂರಿಗೆ ಬಂದಿದ್ದ ಪತಿ-ಪತ್ನಿ ರಾಜಿ ಸಂಧಾನದ ಮೂಲಕ ಇಬ್ಬರು ಎಲ್ಲವನ್ನು ಮರೆತು ಖುಷಿಯಿಂದ ಜೀವನ ನಡೆಸುತ್ತಿದ್ದರು.
ಮುದ್ದಿನ ಮಕ್ಕಳ ಎದುರೇ ತಾಯಿಯನ್ನು ಹಿರಿದು ಕೊಂದಿದ್ದುಕಂಡು ಮಕ್ಕಳಿಗೆ ಶಾಕ್ ಹೊಡೆದಿದೆ. ಅರ್ಧ ಕಿ.ಮೀ. ದೂರ ಆಕೆಯನ್ನ ಕಾಫಿ ತೋಟದ ನಡುವೆ ಎಳೆದು ತಂದು 40 ಅಡಿ ಆಳವಿರುವ ಕೆರೆಯಲ್ಲಿ ಹಾಕಿದ್ದಾನೆ. ಒಟ್ಟ್ಟಿನಲ್ಲಿ ನೆಮ್ಮದಿಯಾಗಿದ್ದ ಜೀವನ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಕೊಲೆಯಾಗಿ ಅಂತ್ಯಕಂಡಿದೆ.ಕೆಲವೇ ಗಂಟೆಗಳಲ್ಲಿ ಚಿಕ್ಕಮಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಚಿರಂಜೀವಿಯನ್ನು ಬಂಧಿಸಿದ್ದಾರೆ. ಆದರೆ ಈ ಕ್ಷಣಿಕ ಪ್ರೀತಿ ಇಬ್ಬರು ಮಕ್ಕಳಿಗೆ ತಾಯಿಯಿಲ್ಲದಂತಾಗಿ ಮಾಡಿದೆ.