ಬೆಳ್ತಂಗಡಿ ; ಮೇ 3ರಂದು ಸಂಜೆ 6.40ಕ್ಕೆ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ವರನಿಗೆ ಧೋತಿ ಮತ್ತು ಶಾಲು ಮತ್ತು ವಧುವಿಗೆ ಸೀರೆ, ಕುಪ್ಪಸ ಮತ್ತು ಮಂಗಳಸೂತ್ರವನ್ನು ನೀಡಲಾಗುವುದು. ಎರಡನೇ ಮದುವೆಗೆ ಅವಕಾಶವಿಲ್ಲವೆಂದು ಹೇಳಿದ್ದಾರೆ.
ಮದುವೆ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಭರಿಸಲಿದೆ.
ಅತಿಯಾದ ಮದುವೆ ಮತ್ತು ವರದಕ್ಷಿಣೆ ಪದ್ಧತಿಯನ್ನು ತಡೆಯಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಸಾಮೂಹಿಕ ವಿವಾಹವನ್ನು ಆರಂಭಿಸಿದರು.
ಪ್ರಸಿದ್ಧ ಸಾಮೂಹಿಕ ವಿವಾಹದಲ್ಲಿ ಒಟ್ಟು 12,576 ಜೋಡಿಗಳು ಇಷ್ಟರವರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಏಪ್ರಿಲ್ 20 ರೊಳಗೆ ತಮ್ಮ ವಿವರಗಳನ್ನು ಸಲ್ಲಿಸಬೇಕು, ವಿವರಗಳಿಗಾಗಿ ಆಸಕ್ತರು 08256-266644 ಅಥವಾ 96634 64648 (WhatsApp) ಸಂಪರ್ಕಿಸಬಹುದು.