ಬೆಳಗಾವಿ : ಗೂಗಲ್ ಮ್ಯಾಪ್ ಹಾಕಿಕೊಂಡು ದಾರಿ ತಪ್ಪಿ ಕಾಡಿನಲ್ಲಿ ಮಿಸ್ ಆದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾಡಿಗುಂಜಿ ಬಳಿಯ ಕಾಡಿನಲ್ಲಿ ನಡೆದಿದೆ.
ಆಂದ್ರಪ್ರದೇಶದಿಂದ ಗೋವಾಕ್ಕೆ ಹೊರಟಿದ್ದ ಮಹಿಳೆಯರು ಸೇರಿ ಕಾರಿನಲ್ಲಿ ನಾಲ್ವರಿದ್ದು ಗೂಗಲ್ ಮ್ಯಾಪ್ ಅವಾಂತರದಿಂದ ಮಧ್ಯರಾತ್ರಿ ದಾರಿ ತಪ್ಪಿ ಹತ್ತು ಕಿಮೀ ಕಾಡಿನ ಒಳಗಡೆ ಚಲಿಸಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ದಾರಿ ತಪ್ಪಿದ್ದು ಆ ವೇಳೆ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ.
ರಸ್ತೆ ಮುಗಿದು ಹಳ್ಳ ಬಂದಾಗ ತಾವು ದಾರಿ ತಪ್ಪಿದ್ದುಎಂದು ಚಾಲಕನಿಗೆ ಗೊತ್ತಾಗಿದ್ದು ಬಳಿಕ ರಕ್ಷಣೆಗಾಗಿ ಈ ವೇಳೆ 112 ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದ ಚಾಲಕ ಬಳಿಕ ಪೋಲ್ಸರ ಸಹಾಯದಿಂದ ಪತ್ತೆಹಚ್ಚಿ ಮುಖ್ಯ ರಸ್ತೆಗೆ ಕರೆದುಕೊಂಡು ಪೊಲೀಸರು ಗೋವಾ ದಾರಿ ತೋರಿಸಿದ್ದಾರೆ.