Thursday, March 27, 2025
Flats for sale
Homeಜಿಲ್ಲೆಉಳ್ಳಾಲ: ಕೊರಗಜ್ಜನ ಚಿತ್ರದ ಯಶಸ್ಸಿಗೆ ಬುರ್ದುಗೋಳಿ ಗುಳಿಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಭವ್ಯ ಹಾಗೂ...

ಉಳ್ಳಾಲ: ಕೊರಗಜ್ಜನ ಚಿತ್ರದ ಯಶಸ್ಸಿಗೆ ಬುರ್ದುಗೋಳಿ ಗುಳಿಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ಭವ್ಯ ಹಾಗೂ ನಟಿ ಶೃತಿ .

ಉಳ್ಳಾಲ : ಕೊರಗಜ್ಜನ ಕುರಿತಾದ ಬಹು ಬಾಷಾ ಚಿತ್ರ “ಕರಿ ಹೈದ ಕರಿಯಜ್ಜ” ದ ಯಶಸ್ಸಿಗೆ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲಯ ಆದಿಸ್ಥಳಕ್ಕೆ ಭೇಟಿ ನೀಡಿದ ನಟಿಯರಾದ ಭವ್ಯ ,ಶೃತಿ ಮತ್ತು ಚಿತ್ರ ತಂಡವು ಗುಳಿಗನಿಗೆ ಹರಕೆಯ ಹುಂಜವನ್ನ ಸಮರ್ಪಿದ್ದಾರೆ.


ತ್ರಿವಿಕ್ರಮ ಸಫಲ್ಯ ಅವರು 5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ” ಕರಿ ಹೈದ ಕರಿಯಜ್ಜ” ಚಿತ್ರದ ಚಿತ್ರೀಕರಣದ ಆರಂಭದಲ್ಲೇ ನಿರ್ದೇಶಕರಾದ ಸುಧೀರ್ ರಾಜ್ ಉರ್ವ ಅವರ ಸಲಹೆಯಂತೆ ಬುರ್ದುಗೋಳಿ ಕ್ಷೇತ್ರದ ಗುಳಿಗಜ್ಜನಿಗೆ ಹುಂಜ ಮತ್ತು ಮಂಗಳೂರಿನ‌ ನಂದಿಗುಡ್ಡೆಯ ಕೊರಗಜ್ಜನ ಕ್ಷೇತ್ರದಲ್ಲಿ ಕೋಲ ಸೇವೆ ನೀಡುತ್ತೇನೆಂದು ಹರಕೆ ಹೊತ್ತಿದ್ದರಂತೆ.ಅದರಂತೆ ಬುರ್ದುಗೋಳಿ ಕ್ಷೇತ್ರಕ್ಕೆ ಹುಂಜವನ್ನ ಹರಕೆ ನೀಡಿದ್ದು ಗುಳಿಗ-ಕೊರಗಜ್ಜನ ಉದ್ಭವ ಶಿಲೆ ಸಮ್ಮುಖದಲ್ಲಿ ಚಿತ್ರತಂಡದವರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ತೊಂಭತ್ತರ ದಶಕದ ಜನಪ್ರಿಯ ನಾಯಕಿ ನಟಿಯರಾದ ಭವ್ಯ ಮತ್ತು ಶೃತಿ ಅವರು ಕೊರಗಜ್ಜ-ಗುಳಿಗಜ್ಜನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇಂದು ನಟಿ ಭವ್ಯ ಅವರ ಜನುಮ ದಿನ ಈ ಸಂದರ್ಭದಲ್ಲೆ ಕೊರಗಜ್ಜನ ಕ್ಚೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು ನಿಜಕ್ಕೂ ನನಗೆ ಸಿಕ್ಕಿದ ಭಾಗ್ಯ ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕರಿ ಹೈದ ಕರಿಯಜ್ಜ ಚಿತ್ರದ 99 ಶೇಖಡ ಚಿತ್ರೀಕರಣ ಸಂಪೂರ್ಣಗೊಂಡಿದ್ದು ಎಪ್ರಿಲ್ , ತಿಂಗಳಲ್ಲಿ ಬಿಡುಗಡೆಗೊಳಿಸಲಾಗುವುದು.ತುಳು, ಕನ್ನಡ,ಮಳಯಾಳಂ ಬಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ.

ದಕ್ಷಿಣ ಕನ್ನಡದ ಬಂಗಾಡಿ,ಮಡಂತ್ಯಾರ್,ಸೋಮೇಶ್ವರ,ಉಳ್ಳಾಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆದಿದ್ದು ಕೊರಗಜ್ಜನ 800 ವರ್ಷಗಳ ಐತಿಹ್ಯದ ಕಥೆಯನ್ನೇ ಚಿತ್ರದಲ್ಲಿ ಅಳವಡಿಸಲಾಗಿದೆ ಎಂದು ನಿರ್ಮಾಪಕರಾದ ತ್ರಿವಿಕ್ರಮ ಸಫಲ್ಯ ಹೇಳಿದ್ದಾರೆ.


ನಟಿ ಶೃತಿಯವರ ಸುಪುತ್ರಿ ಗೌರಿ ಚಿತ್ರತಂಡದ ಜತೆಯಲ್ಲಿದ್ದರು.ಬಳಿಕ ಚಿತ್ರತಂಡವು ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರಕ್ಕೆ ಹರಕೆಯ ಕೋಲ ನೀಡಲು ತೆರಳಿತು.

ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಕಲ್ಲಾಪು, ಭಂಡಾರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್,ಪ್ರಮುಖರಾದ ಪ್ರಶಾಂತ್ ಗಟ್ಟಿ ಕಾಯಂಗಳ, ಪುರುಷೋತ್ತಮ ಕಲ್ಲಾಪು,ಪ್ರವೀಣ್ ಎಸ್.ಕುಂಪಲ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular