ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುಂಡೂರಿನಲ್ಲಿ ಭಾನುವಾರ ರಾತ್ರಿ ಮನೆಯೊಂದರ ಮುಂದೆ ಕಟ್ಟಿಹಾಕಿದ್ದ ಎರಡು ಕರುಗಳನ್ನು ಚಿರತೆ ತಿಂದು ಹಾಕಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕರುಗಳು ಗುರುವಪ್ಪ ಸಾಲಿಯಾನ್ ಎಂಬುವರಿಗೆ ಸೇರಿದಾಗಿದೆ.
ಚಿರತೆ ಕರುಗಳನ್ನು ಸಮೀಪದ ತೋಟಕ್ಕೆ ಎಳೆದೊಯ್ದು ಕೊಂದು ಹಾಕಿದೆ ಎಂದು ತಿಳಿದುಬಂದಿದೆ.ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿಗೆ ಬಂದು ಆಹಾರ ಹುಡುಕುತ್ತಿರುವುದು ನಾಡಿನ ಜನರನ್ನ ಭಯಬೀತರನ್ನಾಗಿಸಿದೆ.
ಸುಮಾರು ಒಂದು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಚಿರತೆಯೊಂದು ಕರುವಿನ ಮೇಲೆ ದಾಳಿ ಮಾಡಿದ್ದರಿಂದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.


