Tuesday, February 3, 2026
Flats for sale
Homeರಾಜ್ಯಗೋಕಾಕ ; ಖಡ್ಡಾಯವಾಗಿ ಹೆಲ್ಮೇಟ್ ದರಿಸುವಂತೆ ಪೋಲಿಸರಿಂದ ಜಾಥಾ.

ಗೋಕಾಕ ; ಖಡ್ಡಾಯವಾಗಿ ಹೆಲ್ಮೇಟ್ ದರಿಸುವಂತೆ ಪೋಲಿಸರಿಂದ ಜಾಥಾ.

ಗೋಕಾಕ : ನಗರ ಪೋಲಿಸ್ ಠಾಣೆಯ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಹೆಲ್ಮೆಟ್ ಕಡ್ಡಾಯ ಮತ್ತು ಸುರಕ್ಷತೆ ಕುರಿತು ಜಾಥಾ ನಡೆಸಲಾಯಿತು.ವಿವಿದ ಬೀದಿಗಳಲ್ಲಿ ಪೋಲಿಸರು ಹೆಲ್ಮೇಟ್ ದರಿಸಿ ದ್ವಿ ಚಕ್ರದ ಮೇಲೆ ತಿರುಗಿ ದ್ವನಿ ವರ್ದಕದ ಮೂಲಕ ಹೆಲ್ಮೇಟ್ ದರಿಸಿ ಕಾನೂನು ಪಾಲಿಸುವಂತೆ ಕೊರಿದರು.

ಈ ಸಂದರ್ಭದಲ್ಲಿ ನಗರ ಪಿ,ಎಸ್,ಐ, ಕೆ ವಾಲಿಕಾರ ಇವರು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿ ಕುಟುಂಬದ ಆಧಾರ ಸ್ತಂಭವಾಗಿದ್ದಾರೆ. ಪ್ರತಿ ಜೀವಕ್ಕೂ ಬೆಲೆಯಿದೆ. ಇದನ್ನು ತಿಳಿದುಕೊಳ್ಳದೇ ಹುಂಬತನಕ್ಕೆ ಮುಂದಾದರೆ ಜೀವಕ್ಕೆ ಆಪತ್ತು ಖಚಿತ. ಆದ್ದರಿಂದ ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಕುಟುಂಬದ ಆತಂಕ ನಿವಾರಿಸಬೇಕು.ವಾಹನ ಸವಾರರು ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.

ಇನ್ನು ಆಟೋ ರಿಕ್ಷಾದವರು ಮಿತವಾಗಿ ಪ್ಯಾಸೆಂಜರ್‌ ಹಾಕಬೇಕು. ಮಿತವಾದ ವೇಗದಲ್ಲಿ ಚಲಿಸಬೇಕು. ಇತ್ತೀಚಿನ ದಿನಮಾನದಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮಿತವಾಗಿ ಪ್ರಯಾಣಿಕರನ್ನು ಕರೆದೊಯ್ಯಬೇಕೆಂದು ತಿಳಿಸಿ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.ಈ ಸಂಧರ್ಭದಲ್ಲಿ ಎ,ಎಸ್,ಆಯ್,ಉಪ್ಪಾರ, .ಚಂದ್ರು,ಬಿರಾದಾರ,ಕೆ,ಆರ್,ಹಕ್ಯಾಗೋಳ, ನಾಗು ಬೆಳಗಲಿ ಮತ್ತು ಇನ್ನುಳಿದ ಪೊಲೀಸ್‌ ಸಿಬ್ಬಂದಿಗಳು ಬಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular