Thursday, March 12, 2026
Flats for sale
Homeರಾಜ್ಯಹೊಸನಗರ ; ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ಬಿಡದ ವಾಮಚಾರ, ಮನೆ ಸುತ್ತಮುತ್ತ ಬೆರಗುಗೊಳಿಸುವ ವಸ್ತುಗಳು ಪತ್ತೆ.

ಹೊಸನಗರ ; ಗ್ರಾಮ ಪಂಚಾಯಿತಿ ಅಧ್ಯಕ್ಷೆಯನ್ನು ಬಿಡದ ವಾಮಚಾರ, ಮನೆ ಸುತ್ತಮುತ್ತ ಬೆರಗುಗೊಳಿಸುವ ವಸ್ತುಗಳು ಪತ್ತೆ.

ಹೊಸನಗರ : ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ದಿನೇಶ ಅವರ ಮನೆಯ ಸುತ್ತಮುತ್ತ ಅನಾಮಿಕರು ಭಾರೀ ವಾಮಾಚಾರ ನಡೆಸಿರುವ ಘಟನೆ ನಡೆದಿದೆ.

ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದ ಬುಧವಾರ ಬೆಳಗ್ಗೆ ಮನೆ ಮಾಲೀಕರ ಗಮನಕ್ಕೆ ಬಂದಿದೆ.

ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಶಾಲಾ ಮಕ್ಕಳಿಗೆ ಇದರಿಂದ ತೊಂದರೆ ಆಗುಬಹುದು ಎಂದು ಮರಳು ಸಾಗಾಣಿಕೆ ವಾಹನಗಳನ್ನು ಈ ಕಡೆ ಮುಖ ಮಾಡದಂತೆ ಅಕ್ರೋಶ ವ್ಯಕ್ತಪಡಿಸಿದ್ದ ಅಧ್ಯಕ್ಷೆ ಕ್ರಮವನ್ನು ಖಂಡಿಸಿ, ಯಾರೋ ಅಪರಿಚಿತ ಅಕ್ರಮ ಮರಳು ಸಾಗಾಟದಾರರು ಈ ಕೃತ್ಯ ನಡೆಸಲು ಮುಂದಾಗಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ. ಮನೆ ಮಾಲೀಕ ದಿನೇಶ್ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಹೊಸನಗರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular