ಪುತ್ತೂರು : ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹಾವು ಕಡಿದ ಘಟನೆ ನಿನ್ನೆ ರಾತ್ರೆ ವರದಿಯಾಗಿದೆ. ಮನೆಯ ತೋಟದಲ್ಲಿ ವಾಕಿಂಗ್ ಮಾಡುತಿದ್ದ ವೇಳೆ ಕೊಳಕಮಂಡಲ ಹಾವು ಕಚ್ಚದೆ ಎಂದು ತಿಳಿದುಬಂದಿದೆ.
ಕರಾವಳಿ ಭಾಗದಲ್ಲಿ ಕಂದಡಿ ಎಂದು ಕರೆಯುವ ಹಾವು,ಅತ್ಯಂತ ನಂಜಿನ ವಿಷ ಹೊಂದಿರೋ ಹಾವು ಇದಾಗಿದೆ ಇದರ ಕಡಿತದಿಂದ ಎಷ್ಟೋ ಜನ ಮೃತಪಟ್ಟ ಈ ಮೊದಲು ವರದಿಯಾಗಿದೆ . ತಕ್ಷಣವೇ ಮನೆ ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ.
ಸಂಸದ ನಳೀನ್ ಕುಮಾರ್ ಕಟೀಲ್ ಆಸ್ಪತ್ರೆಗೆ ಭೇಟಿ ನೀಡಿದ್ದು ಅವರ ಆರೋಗ್ಯ ವಿಚಾರಿಸಿದ್ದಾರೆ .ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದಿದೆ.


