ಹೊಳೆನರಸೀಪುರ ; ಪಟ್ಟಣದ ಕೆಎಂಜಿ ಪೆಟ್ರೋಲ್ ಬಂಕ್ ಹತ್ತಿರ ಸಂಜೆ 6 ಗಂಟೆ ಸುಮಾರಿನಲ್ಲಿ ಎರಡು ದ್ವಿಚಕ್ರ ವಾಹನಗಳನ್ನು ನಡುವೆ ಡಿಕ್ಕಿ ಒಬ್ಬ ಸವಾರ ಸವನಪ್ಪಿದ್ದು ಮತ್ತೊರ್ವನಿಗೆ ಗಂಭೀರ ಗಾಯಗಳಾಗಿದ ಘಟನೆ ನಡೆದಿದೆ.
ಪಟ್ಟಣದ ಹೇಮಾವತಿ ಸೇತುವೆ ಸಮೀಪ ಇರುವ ಕೆಎಂಜಿ ಪೆಟ್ರೋಲ್ ಬಂಕ್ ಹತ್ತಿರ ಹೆದ್ದಾರಿಯಲ್ಲಿ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಹೊಳೆನರಸೀಪುರ ಪಟ್ಟಣದ ಬಸವನಗುಡಿ ಬೀದಿಯ ನಿವಾಸಿ ಹೈದರ್ ಷರೀಫ್ (37)ಎಂಬ ಯುವಕ ಮೃತಪಟ್ಟಿದ್ದಾರೆ ಹಾಗೂ ಇನ್ನೊಂದು ಚಾಲಕ ಅಗ್ರಾರ್ಗೆಟ್ ಗ್ರಾಮದ ಅಭಿಲಾಷೆ ಎಂದು ಗುರುತಿಸಲಾಗಿದ್ದು ಆತನಿಗೂ ಗಂಭೀರ ಗಾಯಗಳಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


