ಮಂಗಳೂರು : ದುಬೈನಿಂದ ಬಂದ ಮೂವರು ಪ್ರಯಾಣಿಕರಿಂದ 42.89 ಲಕ್ಷ ಮೌಲ್ಯದ 708 ಗ್ರಾಂ ಚಿನ್ನಾಭರಣವನ್ನು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮೊದಲ ಪ್ರಕರಣದಲ್ಲಿ, ಅಕ್ಟೋಬರ್ 31 ಮತ್ತು ನವೆಂಬರ್ 2 ರಂದು ದುಬೈನಿಂದ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರು 17.40 ಲಕ್ಷ ರೂಪಾಯಿ ಮೌಲ್ಯದ 288 ಗ್ರಾಂ ಚಿನ್ನವನ್ನು ತಮ್ಮ ಪ್ಯಾಂಟ್ನ ಒಳಗಡೆ ಒಳ ಉಡುಪುಗಳಲ್ಲಿ ಹಾಗೂ ಸಾಕ್ಸ್ನಲ್ಲಿ ಬಚ್ಚಿಟ್ಟು ಚಿನ್ನದ ಸರವನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಎರಡನೇ ಪ್ರಕರಣದಲ್ಲಿ, ನವೆಂಬರ್ 5 ರಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ 814 ನಲ್ಲಿ ಬಂದ ಕೇರಳದ ಕಾಸರಗೋಡು ನಿವಾಸಿಯೊಬ್ಬರು ಅವರ ಟ್ರಾಲಿ ಬ್ಯಾಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದರು. ಟಿಫಾನಿ ಎಕ್ಲೇರ್ಸ್ ಬ್ರಾಂಡ್ ಹೆಸರಿನ ಏಳು ಚಾಕೊಲೇಟ್ ಪ್ಯಾಕೆಟ್ಗಳಲ್ಲಿ 25.49 ಲಕ್ಷ ಮೌಲ್ಯದ 420 ಗ್ರಾಂ ತೂಕದ 24 ಕ್ಯಾರೆಟ್ ಚಿನ್ನವನ್ನು ಪುಡಿಯಲ್ಲಿ ಬಚ್ಚಿಟ್ಟಿದ್ದರು.


