ಹಾಸನ : ಹೊಳೆನರಸೀಪುರ ತಾಲೂಕಿನ ದೇವರಗುಡ್ಡೆನ ಹಳ್ಳಿಯಲ್ಲಿ ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿಗೆ ಪುಷ್ಠಿ ನೀಡುವಂತೆ ಒರ್ವ ಯುವಕ ಮೃತಪಟ್ಟಿದ್ದಾರೆ. ತಾಲೂಕಿನ ದೇವರಗುಡ್ಡೆನಹಳ್ಳಿ ಗ್ರಾಮದ ಅಭಿಲಾಷ್ ಎಂಬ ಯುವಕ ಹಾವು ಕಡಿದು ಅಕ್ಟೋಬರ್ 29ರ ಭಾನುವಾರ ಸಂಜೆ ಮೃತಪಟ್ಟಿದ್ದರು.
ಅಭಿಲಾಷ್ ಮೃತಪಟ್ಟ ನಂತರ ಆತನ ಮೊಬೈಲ್ ಅನ್ನು ಸ್ನೇಹಿತರು ಪರಿಶೀಲನೆ ನಡೆಸಿದಾಗ ಬೆಚ್ಚಿ ಬೀಳಿಸುವ ದೃಶ್ಯ ಪತ್ತೆಯಾಗಿದೆ. ಹಲವಾರು ದಿನಗಳ ಹಿಂದೆ ಜಮೀನಿನಲ್ಲಿ ನೀರು ಆಯಿಸುವ ನಾಲ್ಕಿಂಚು ಪೈಪಿನಲ್ಲಿ ನಾಗರಹಾವು ಒಂದಕ್ಕೆ ಕೀಟಲೆ ಮಾಡುತ್ತಿರುವುದು ಮತ್ತು ಹಾವು ಎಡೆಯತ್ತಿ ಬುಸುಗುಡುತ್ತಿರುವುದನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿರುವ ದೃಶ್ಯ ಪತ್ತೆಯಾಗಿದೆ. ಈ ಹಾವು ತಾನು ಅನುಭವಿಸಿದ ಹಿಂಸೆಗೆ ಸೇಡು ತೀರಿಸಿಕೊಂಡಿರಬಹುದು ಎಂಬ ಗ್ರಾಮಸ್ಥರ ಮಾತು ಹಾವಿನ ದ್ವೇಷ 12 ವರ್ಷ ಎಂಬ ಪೂರ್ವಿಕರ ಮಾತಿಗೆ ಪುಷ್ಟಿ ನೀಡುವಂತೆ ಇದ್ದರೂ ಇಂದು ಕುಟುಂಬ ಸದಸ್ಯರು ಅನುಭವಿಸುತ್ತಿರುವ ಮಾನಸಿಕ ಔಷಧಿ ಉಂಟೆ. ಆದರೆ ಹಾವಿಗೆ ಚಿತ್ರ ಹಿಂಸೆ ಕೊಟ್ಟ ಪರಿಣಾಮ ಸೇಡು ತೀರಿಸಿಕೊಂಡಿಂದೆ ಎಂಬುದು ಜನರ ಮಾತು .


