ಮಂಗಳೂರು : ವ್ಯಕ್ತಿಯೋರ್ವ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರನ್ನು ಯಾಮಾರಿಸಿ ವಾಟ್ಸಾಪ್ ಮೂಲಕ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ . ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿರುವ ನೆಪದಲ್ಲಿ ಹಣಕ್ಕಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದು ,ಆರೋಗ್ಯದ ತುರ್ತು ಹಣಕಾಸಿನ ಅಗತ್ಯವಿದೆಯೆಂದು ವಾಟ್ಸಾಪ್ ಸಂದೇಶ ಕಳುಹಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ನಂಬರ್ ಬಳಸಿ ದುಷ್ಕರ್ಮಿಗಳು ಹಣ ಕೇಳುತ್ತಿದ್ದು, ನಾನು ಆಸ್ಪತ್ರೆಯಲ್ಲಿದ್ದೇನೆ, ನನ್ನ ಯುಪಿಐ ಕೆಲಸ ಮಾಡುತ್ತಿಲ್ಲ ಎಂದು ಸಂದೇಶ ರವಾನಿಸಿದ್ದಾನೆ. ನನಗೆ ಸ್ವಲ್ಪ ಹಣ ಬೇಕು. ನೀವು ವರ್ಗಾವಣೆ ಮಾಡಬಹುದೇ? ನಾನು ಒಂದು ಗಂಟೆಯೊಳಗೆ ಹಿಂತಿರುಗುತ್ತೇನೆ. ” ಎಂಬ ಜಾಮಾ ಖದೀಮರು ನಗರ ಪೊಲೀಸ್ ಕಮಿಷನರ್ ರವರ ಹೆಸರಲ್ಲೇ ಬೇಡುತ್ತಿರುವುದು ವಿಪರ್ಯಾಸ.


