Sunday, July 26, 2026
Homeವಿದೇಶಮಂಗಳೂರು : ಹೃದಯಾಘಾತದಿಂದ ಪಂಜಿಮೊಗರು ಮೂಲದ ಯುವಕ ದುಬೈನಲ್ಲಿ ಸಾವು.

ಮಂಗಳೂರು : ಹೃದಯಾಘಾತದಿಂದ ಪಂಜಿಮೊಗರು ಮೂಲದ ಯುವಕ ದುಬೈನಲ್ಲಿ ಸಾವು.

ಮಂಗಳೂರು : ಕಳೆದ ಏಳು ವರ್ಷಗಳಿಂದ ದುಬೈನಲ್ಲಿ ಉದ್ಯೋಗದಲ್ಲಿದ್ದ ಪಂಜಿಮೊಗರು ಮೂಲದ ಯುವಕ ಅಕ್ಟೋಬರ್ 22, ಭಾನುವಾರ ರಾತ್ರಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

ಪಂಜಿಮೊಗರು ವಿದ್ಯಾನಗರದ ಮಹಮ್ಮದ್ ಎಂಬವರ ಪುತ್ರ ಅಖ್ತರ್ (27) ಮೃತ ವ್ಯಕ್ತಿ. ಭಾನುವಾರ, ಅಖ್ತರ್ ಕರ್ತವ್ಯ ಮುಗಿಸಿ ತನ್ನ ಕೋಣೆಗೆ ಮರಳಿದ್ದ. ಆದರೂ ಅವರು ಮೇಲೇಳದಿದ್ದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಅವರ ಕುಟುಂಬಕ್ಕೆ ಸಹಾಯ ಮಾಡಲು ಕೆಸಿಎಫ್ ಸಂಘಟನೆ ಶ್ರಮಿಸುತ್ತಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular