Thursday, March 12, 2026
Flats for sale
Homeದೇಶಚಿತ್ರದುರ್ಗ ; ಕುರಿಮರಿ ಬ್ಯಾಡ ಹೋಗೋ.. ಏನ್ ನೀವೆಲ್ಲಎಂದ ಸಿಎಂ ಸಿದ್ದರಾಮಯ್ಯ..!

ಚಿತ್ರದುರ್ಗ ; ಕುರಿಮರಿ ಬ್ಯಾಡ ಹೋಗೋ.. ಏನ್ ನೀವೆಲ್ಲಎಂದ ಸಿಎಂ ಸಿದ್ದರಾಮಯ್ಯ..!

ಚಿತ್ರದುರ್ಗ ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡಲು ತಂದಿದ್ದ ಕುರಿಮರಿಯನ್ನು ಸ್ವೀಕರಿಸಿದ ಕಾರಣ ವ್ಯಕ್ತಿಯೊಬ್ಬ ಕುರಿಮರಿಯನ್ನು ವಾಪಸ್ ಕೊಂಡೊಯ್ದ ಪ್ರಸಂಗ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.

ಹಿರಿಯೂರು ತಾಲೂಕು ಕಚೇರಿ ಬಳಿ ಇರುವ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿವೇಶನದಲ್ಲಿ ನೂತನ ಕನಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸುಮಾರು ಸಂಜೆ ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಕರಿ ಕಂಬಳಿ ಹಾಗೂ ಕುರಿಮರಿ ನೀಡಲು ಮುಂದಾದಾಗ. ಏ. ಕುರಿಮರಿ ಬ್ಯಾಡ ಹೋಗೋ.. ಏನ್ ನೀವೆಲ್ಲ. ಎಂದು ತಿರಸ್ಕರಿಸಿದ್ದಾರೆ.

ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿದ ಬಳಿಕ ಸಂಘದ ಸದಸ್ಯರು ಮೈಕ್‌ನಲ್ಲಿ ಹಿರಿಯೂರು ತಾಲೂಕು ಕುರುಬರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಕರಿ ಕಂಬಳಿ ಹೊದಿಸಿ, ಕುರಿಮರಿ ನೀಡಿ ಗೌರವಿಸಬೇಕು ಎಂದು ಮೈಕ್ ಹಿಡಿದು ಅನೌನ್ಸ್ ಮಾಡಲಾಯಿತು. ಅದರಂತೆ ಕುರುಬ ಸಂಘದಿಂದ ಸಿಎಂ ಅವರಿಗೆ ಕಂಬಳಿಯನ್ನು ಹೊದಿಸಿ ಕುರಿಮರಿ ಉಡುಗೊರೆ ನೀಡಲು ಮುಂದಾದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರಿಮರಿಯನ್ನು ಸ್ವೀಕರಿಸಲಿಲ್ಲ. ಸರ್ ಕುರಿಮರಿ ಇಸ್ಕಳಿ ಸರ್. ಕುರಿಮರಿ ಇಸ್ಕಳಿ ಎಂದು ಕೂಗಿದ್ರು.. ಸಿದ್ದರಾಮಯ್ಯ ಮಾತ್ರ ಕಿವಿಗೊಡಲಿಲ್ಲ.ನಂತರ ಕುರಿಮರಿ ಹೊತ್ತು ತಂದಿದ್ದ ವ್ಯಕ್ತಿ ಕುರಿಮರಿಯನ್ನು ಹೆಗಲಮೇಲೆ ಹೊತ್ತು ವಾಪಸ್ ಕೊಂಡೊಯ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular