Sunday, July 26, 2026
Homeಜಿಲ್ಲೆಮಂಗಳೂರು : ಪ್ರಮಾಣಪತ್ರ, ಗುರುತಿನ ಚೀಟಿ ವಿತರಣೆಯಲ್ಲಿ ವಿಳಂಬ: ಬೀದಿಬದಿ ವ್ಯಾಪಾರಿಗಳಿಂದ ಎಂಸಿಸಿ ಆಯುಕ್ತರ ಕಚೇರಿಗೆ...

ಮಂಗಳೂರು : ಪ್ರಮಾಣಪತ್ರ, ಗುರುತಿನ ಚೀಟಿ ವಿತರಣೆಯಲ್ಲಿ ವಿಳಂಬ: ಬೀದಿಬದಿ ವ್ಯಾಪಾರಿಗಳಿಂದ ಎಂಸಿಸಿ ಆಯುಕ್ತರ ಕಚೇರಿಗೆ ಘೇರಾವ್‌.

ಮಂಗಳೂರು : ನೂರಾರು ಬೀದಿಬದಿ ವ್ಯಾಪಾರಿಗಳು ಗುರುವಾರ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಘೇರಾವ್ ಹಾಕಿ ಪ್ರತಿಭಟಿಸಿದರು.

ಎಂಸಿಸಿ ಆಯುಕ್ತರ ನಿರ್ಲಕ್ಷ್ಯಕ್ಕೆ ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ನೇರ ಹೊಣೆ ಎಂದು ಬೀದಿಬದಿ ವ್ಯಾಪಾರಿಗಳು ಆರೋಪಿಸಿದರು. ಶಾಸಕರ ಒತ್ತಡದಿಂದಾಗಿ ಎಂಸಿಸಿ ಗುರುತಿನ ಚೀಟಿ ಮತ್ತು ಪ್ರಮಾಣಪತ್ರಗಳನ್ನು ನೀಡಲು ವಿಳಂಬ ಮಾಡುತ್ತಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಬಿ ಕೆ ಇಮ್ತಿಯಾಜ್ ಆರೋಪಿಸಿದ್ದಾರೆ. ಎಂಸಿಸಿ ಆಯುಕ್ತರು 3 ಕೋಟಿ ಲಂಚ ನೀಡಿ ಪೋಸ್ಟಿಂಗ್ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಇದೇ ವೇಳೆ ಬೀದಿಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು 2 ಲಕ್ಷ ಲಂಚ ಪಡೆದು ಮಾರಾಟಗಾರರಿಗೆ ವಂಚಿಸುತ್ತಿದ್ದಾರೆ ಎಂದು ಆಯುಕ್ತರು ಆರೋಪಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular