Saturday, March 7, 2026
Flats for sale
Homeದೇಶಮುಂಬೈ : ಭಾರಿ ಮಳೆಯಿದ್ದ ಕಾರಣ ರನ್‌ವೇಯಿಂದ ಜಾರಿದ ವಿಮಾನ .

ಮುಂಬೈ : ಭಾರಿ ಮಳೆಯಿದ್ದ ಕಾರಣ ರನ್‌ವೇಯಿಂದ ಜಾರಿದ ವಿಮಾನ .

ಮುಂಬೈ : ನಸೀಬ್ ಸರಿಇದ್ದರೆ ಹೇಗೂ ಬದುಕಬಹುದು ಎಂಬುದು ಇಲ್ಲಿದೆ , ಆರು ಪ್ರಯಾಣಿಕರಿದ್ದ ಸಣ್ಣ ವಿಮಾನವೊಂದು ರನ್‌ವೇಯಿಂದ ಜಾರಿ ಹೋದ ಘಟನೆ ಮುಂಬೈ ವಿಮಾನನಿಲ್ದಾಣದಲ್ಲಿ ನಡೆದಿದೆ. ಭಾರಿ ಮಳೆಯ ನಡುವೆ ವಿಮಾನ ಇಳಿಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ವಿಎಸ್‌ಆರ್ ವೆಂಚರ್‌ಗೆ ಸೇರಿದ ಲಿಯರ್‌ಜೆಟ್ ೪೫ ವಿಮಾನ ಜಾರಿತು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಹೇಳಿಕೆ ತಿಳಿಸಿದೆ. ಭಾರಿ ಮಳೆಯಿದ್ದ ಕಾರಣ ಗೋಚರತೆ ೭೦೦ ಮೀಟರ್ ಇತ್ತು ಎಂದು ಅದು ಸ್ಪಷ್ಟಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular