ಮಂಡ್ಯ : ಮಂಡ್ಯ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಆ.2 ರ ಬುಧವಾರ ಪ್ರಾರಂಭವಾಗಬೇಕಿದ್ದ ತಾಲ್ಲೂಕಿನ ತೋರೆಮಾವಿನಕೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರದ ಸಂಘದ ಕಾರ್ಯಚಟುವಟಿಕೆಗೆ ಸಚಿವ ಎನ್. ಚಲುವರಾಯಸ್ವಾಮಿ ಅಡ್ಡಗಾಲು ಹಾಕಿದ್ದಾರೆ ಎಂದು ಮನ್ಮುಲ್ ನಿರ್ದೇಶಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೇರಿ ಕಾರ್ಯಚಟುವಟಿಕೆಯ ಪ್ರಾರಂಭೋತ್ಸವಕ್ಕೆ ಗ್ರಾಮಕ್ಕೆ ಮನ್ಮುಲ್ ಕಚೇರಿಯ ಅಧಿಕಾರಿಗಳು ಹಾಗೂ ಕಾರ್ಯಚಟುವಟಿಕೆ ಪ್ರಾರಂಭದ ಆದೇಶ ಪ್ರತಿಯೊಂದಿಗೆ ಗ್ರಾಮಕ್ಕೆ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಆಗಮಿಸಿದ್ದರು.
ಸಚಿವ ಎನ್. ಚಲುವರಾಯಸ್ವಾಮಿ ಸೂಚನೆಯಂತೆ ಗ್ರಾಮಕ್ಕೆ ಆಗಮಿಸಿದ್ದು ಅಧಿಕಾರಿಗಳ ಮತ್ತು ಸಚಿವರ ವಿರುದ್ದ ನಿರ್ದೇಶಕ ಬಾಲು ಆಕ್ರೋಶ ವ್ಯಕ್ತಪಡಿಸಿದ್ದು,ಸಚಿವರ ಹಿಂಬಾಲಕರು ನಡೆಸಿತ್ತಿರುವ ಖಾಸಗಿ ಡೇರಿಯ ಉಳಿವಿಗಾಗಿ ಮನ್ಮುಲ್ ವಿರುದ್ದ ಸಚಿವರ ಕಾರ್ಯತಂತ್ರ ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವರ ಪರ-ವಿರೋಧದ ಗ್ರಾಮಸ್ಥರ ನಡೆಯನ್ನು ಗಮನಿಸಿ, ಮನ್ಮುಲ್ ನೀಡಲಾಗಿದ್ದ ಆದೇಶದ ಪ್ರತಿಯನ್ನು ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ನೀಡಿ ಸ್ಥಳದಿಂದ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಹೊರಟು ಹೋಗಿದ್ದಾರೆ.


