Sunday, July 26, 2026
Homeರಾಜ್ಯಮೈಸೂರು ; ಹುಣಸೂರಿನಲ್ಲಿ ಇಬ್ಬರು ಸೆಕ್ಯುರಿಟಿ ಗಳ ಬರ್ಬರ ಹತ್ಯೆ.

ಮೈಸೂರು ; ಹುಣಸೂರಿನಲ್ಲಿ ಇಬ್ಬರು ಸೆಕ್ಯುರಿಟಿ ಗಳ ಬರ್ಬರ ಹತ್ಯೆ.

ಮೈಸೂರು : .ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಇಬ್ಬರು ಸೆಕ್ಯೂರಿಟಿಗಳ ಬರ್ಬರ ಹತ್ಯೆ ಮಾಡಿರುವ ಘಟನೆ ಹುಣಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿ ನಡೆದಿದೆ.

ಮಿಸ್ಬಾ ಸಾಮಿಲ್‌ ನಲ್ಲಿ ಸೆಕ್ಯೂರಿಟಿ ಯಾಗಿ ಕೆಲಸಮಾಡುತ್ತಿದ್ದ 75 ವರ್ಷದ ವೆಂಕಟೇಶ್​ ಹಾಗೂ 65 ವರ್ಷದ ಷಣ್ಮುಗ ಕೊಲೆಯಾದವರೆಂದು ತಿಳಿದುಬಂದಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಸಾಮಿಲ್ ನಿಂದ ಸೆಕ್ಯುರಿಟಿ ವೆಂಕಟೇಶ್ ಹೊರಗೆ ಬರುತ್ತಿದ್ದರಾದರೂ ಗುರುವಾರ ಬೆಳಿಗ್ಗೆ 7 ಗಂಟೆ ಆದ್ರೂ ಹೊರಗೆ ಬಂದಿರಲಿಲ್ಲ.ಇದರಿಂದ ಅನುಮಾನಗೊಂಡ ನೆರೆ ಮನೆಯವರು ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಬಂದು ತಪಾಸಣೆ ಮಾಡಿದಾಗ ನಾಲ್ಕು ವರ್ಷಗಳಿಂದ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಹಾಗೂ ಶಣ್ಮುಗ ಇಬ್ಬರನ್ನು ಕೊಲೆ ಮಾಡಿರುವುದು ಪತ್ತೆಯಾಗಿದೆ.

ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ನಡೆಯುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular