ನವದೆಹಲಿ : ಭಾರತೀಯ ಕ್ರಿಕೆಟಿಗ ಹಾಗೂ ಮಾಜಿ ಆರ್‌ಸಿಬಿ ಆಟಗಾರ ಯುಜ್ವೇಂದ್ರ ಚಹಲ್ ಅವರು ಇದೀಗ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ರಾಷ್ಟ್ರೀಯ ಒಬಿಸಿ ಮೋರ್ಚಾದ ನೂತನ ಕಾರ್ಯಕಾರಿಣಿಯಲ್ಲಿ ಚಹಲ್ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಿರುವುದಾಗಿ ಘೋಷಿಸಿದೆ.
ಕಳೆದ ಕೆಲ ದಿನಗಳ ಹಿಂದೆ ಪ್ರಥಮ ದರ್ಜೆ (ಫಸ್ಟ್ ಕ್ಲಾಸ್) ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಚಹಲ್, ಇದೀಗ ಸಕ್ರಿಯ ಕ್ರಿಕೆಟ್ ವೃತ್ತಿಜೀವನದ ನಡುವೆಯೇ ರಾಜಕೀಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿಣಿಯಲ್ಲಿ ವಿಶೇಷ ಆಹ್ವಾನಿತರಾಗಿ ಸ್ಥಾನ ಪಡೆದಿರುವುದು ಅವರ ಸಾರ್ವಜನಿಕ ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.
ಕ್ರಿಕೆಟ್ ಮೂಲಕ ಗುರುತಿಸಿಕೊಂಡಿದ್ದ ಯುಜ್ವೇಂದ್ರ ಚಹಲ್ ಅವರ ರಾಜಕೀಯ ಪ್ರವೇಶ ಇದೀಗ ಕ್ರೀಡಾ ಹಾಗೂ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ

