Friday, September 25, 2026
Homeಜಿಲ್ಲೆಬೆಂಗಳೂರು : ಧರ್ಮಸ್ಥಳ ದ ಹಳೇ ಪ್ರಕರಣಕ್ಕೆ SIT ರಚನೆ : ಸರ್ಕಾರದಿಂದ ಮಹತ್ವದ ಆದೇಶ.

ಬೆಂಗಳೂರು : ಧರ್ಮಸ್ಥಳ ದ ಹಳೇ ಪ್ರಕರಣಕ್ಕೆ SIT ರಚನೆ : ಸರ್ಕಾರದಿಂದ ಮಹತ್ವದ ಆದೇಶ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಹಳೆಯ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಮಹತ್ವದ ಆದೇಶ ಹೊರಡಿಸಿದೆ.b2014ರಲ್ಲಿ CBI ಮರುನೋಂದಾಯಿಸಿದ್ದ FIR ಆಧರಿಸಿ ಪ್ರಕರಣದ ಮುಂದಿನ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಪ್ರಕರಣದ SIT ತನಿಖೆಗೆ ಆದೇಶಿಸಲಾಗಿದೆ.

ಐವರು ಅಧಿಕಾರಿಗಳನ್ನೊಳಗೊಂಡ ಸಿಟ್ಪ್ರ ಕರಣದ ತನಿಖೆಗಾಗಿ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. SIT ಮುಖ್ಯಸ್ಥರಾಗಿ ಎನ್. ಶಶಿಕುಮಾರ್, IPS ಅವರನ್ನು ನೇಮಕ ಮಾಡಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತ ವಾರ್ತೆ SP ನಿಶಾ ಜೇಮ್ಸ್, CID SP ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಆಸ್ಪತ್ರೆಗೆ ವೆಂಕಟೇಶ್ ಪ್ರಸನ್ನ ಅವರು SIT ಸದಸ್ಯರಾಗಿದ್ದಾರೆ. SIT ತಂಡ ಎನ್. ಶಶಿಕುಮಾರ್, IPS – SIT ಮುಖ್ಯಸ್ಥರು ಸುಧೀರ್ ಕುಮಾರ್ ರೆಡ್ಡಿ – ಮಂಗಳೂರು ನಗರ ಪೊಲೀಸ್ ಆಯುಕ್ತರುbನಿಶಾ ಜೇಮ್ಸ್ – ರಾಜ್ಯ ಗುಪ್ತ ವಾರ್ತೆ SP
ಲೋಕೇಶ್ ಜಗಲಸಾರ್ – CID ಸ್ಪೆಷಲ್ವೆಂ ಕಟೇಶ್ ಪ್ರಸನ್ನ – ಬೆಂಗಳೂರು ಗ್ರಾಮಾಂತರ ASPb2014ರ CBI FIR ಆಧಾರ 2014ರಲ್ಲಿ CBI ಮರುನೋಂದಾಯಿಸಿದ್ದ FIR ಅನ್ನು ಆಧಾರವಾಗಿಟ್ಟುಕೊಂಡು ಪ್ರಕರಣದ ತನಿಖೆ ನಡೆಸಲಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಹಿಂದಿನ ತನಿಖೆಯ ಅಂಶಗಳು ಹಾಗೂ ಲಭ್ಯವಿರುವ ಇತರ ಮಾಹಿತಿಯನ್ನು ಪರಿಶೀಲಿಸಿ SIT ಮುಂದಿನ ತನಿಖೆ ಕೈಗೊಳ್ಳಲಿದೆ. ದಕ್ಷಿಣ ಕನ್ನಡದ ಹಳೆಯ ಪ್ರಕರಣಕ್ಕೆ ಇದೀಗ ರಾಜ್ಯ ಸರ್ಕಾರವೇ SIT ರಚಿಸಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular