Sunday, August 2, 2026
Homeರಾಜ್ಯಚಿಕ್ಕಮಗಳೂರು : ಕಾಫಿನಾಡಲ್ಲಿ ಮಳೆಯ ರೌದ್ರನರ್ತನ : ಸೇತುವೆ ಜಲಾವೃತ, ಗ್ರಾಮಗಳ ಸಂಪರ್ಕ ಕಡಿತದ ಭೀತಿ.

ಚಿಕ್ಕಮಗಳೂರು : ಕಾಫಿನಾಡಲ್ಲಿ ಮಳೆಯ ರೌದ್ರನರ್ತನ : ಸೇತುವೆ ಜಲಾವೃತ, ಗ್ರಾಮಗಳ ಸಂಪರ್ಕ ಕಡಿತದ ಭೀತಿ.

ಚಿಕ್ಕಮಗಳೂರು : ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿದ್ದು, ಕೊಪ್ಪ ತಾಲೂಕಿನ ಕೊಗ್ರೆ ಹಾಗೂ ಮೆಣಸಿನಹಾಡ್ಯ ಗ್ರಾಮಗಳ ನಡುವಿನ ಸೇತುವೆ ಜಲಾವೃತವಾಗಿದೆ.

Oplus_131072

ಸೇತುವೆಯ ಮೇಲೆ ನೀರು ಹರಿಯುತ್ತಿರುವ ಕಾರಣ ಸ್ಥಳೀಯ ನಿವಾಸಿಗಳು ಓಡಾಡಲು ಪರದಾಡುವಂತಾಗಿದೆ. ಅಪಾಯದ ನಡುವೆಯೇ ಕೆಲ ಕಾರು ಹಾಗೂ ಬೈಕ್ ಸವಾರರು ಸೇತುವೆ ದಾಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನೀರಿನ ಹರಿವು ನಿರಂತರವಾಗಿ ಹೆಚ್ಚುತ್ತಿದ್ದು, ಕೊಗ್ರೆ–ಮೆಣಸಿನಹಾಡ್ಯ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಳ್ಳುವ ಭೀತಿ ಎದುರಾಗಿದೆ. ಸ್ಥಳೀಯರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಜಲಾವೃತ ಸೇತುವೆ ದಾಟದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular